ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕೊವೀಡ್ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ‌ಇಲ್ಲ:ತಾ ಪಂ ಸಾಮಾನ್ಯ ಸಭೆಯಲ್ಲಿ ‌ಮಾಹಿತಿ ನೀಡಿದ ತಾಲೂಕಾ ವೈದ್ಯಾಧಿಕಾರಿ

ಕಲಘಟಗಿ:ಕೊವೀಡ್-19 ಚಿಕಿತ್ಸೆ ತಾಲೂಕಾ ಆಸ್ಪತ್ರೆ ಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ತಾಲೂಕಾ ವೈದ್ಯಾಧಿಕಾರಿ ಡಾ ‌ಬಸವರಾಜ‌ ಬಾಸೂರ ತಿಳಿಸಿದರು.

ಸೋಮವಾರ ಸ್ಥಳೀಯ ತಾ ಪಂ ‌ಸಭಾ ಭವನದಲ್ಲಿ ಜರುಗಿದ ತಾ ಪಂ ಸಾಮಾನ್ಯ ಸಭೆಯಲ್ಲಿ ‌ಮಾಹಿತಿ‌ ನೀಡಿ ಮಾತನಾಡಿದ ಅವರು,

ಕೊವೀಡ್-19 ಕುರಿತು ‌ಯಾರು ಭಯ‌ಪಡುವ ಅವಶ್ಯಕತೆ ಇಲ್ಲ,ಆದರೆ ಎಚ್ಚರಿಕೆ ಅವಶ್ಯವಿದೆ.

ಈ ವರಗೆ ತಾಲೂಕಿನಲ್ಲಿ ಒಟ್ಟು 464 ಕೂವೀಡ್ ಕೆಸ್ ಗಳು ಪತ್ತೆಯಾಗಿವೆ,ಇದರಲ್ಲಿ 105 ಜನರು ಹೋಂ ಐಸೂಲೇಶನ್ ಮುಗಿಸಿದ್ದಾರೆ,203 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ತಾಲೂಕಿನಲ್ಲಿ ಒಟ್ಟು 12 ಜನರು ಕೊವೀಡ್ ಗೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ‌ ನೀಡಿದರು.ತಾಲೂಕಾ ಆಸ್ಪತ್ರೆ ಯಲ್ಲಿ ತಜ್ಞ ವೈದ್ಯರ ಕೊರತೆ ಇದೆ ಎಂದು ಡಾ ಚವ್ಹಾಣ ಮಾಹಿತಿ ನೀಡಿದರು.

ಆಸ್ಪತ್ರೆ ಆವರಣ ‌ಕೊಳಚೆ ಗುಂಡಿಯಾಗಿದೆ ಇದ್ದನ್ನು ಸರಿಪಡಿಸಿ ಸ್ವಚ್ಚತೆ ಕಾಪಾಡಲು ತಾ ಪಂ ಅಧ್ಯತ ಹಾಗೂ ಉಪಾಧ್ಯಕ್ಷರು ಸೂಚಿಸಿದರು.

ಸಮಾಜ‌ ಕಲ್ಯಾಣ ಇಲಾಖೆಯ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ ಕಾರಣ ಕಚೇರಿ ಕಟ್ಟಲು ಜಾಗೆ ಮಂಜೂರಿ‌ ಮಾಡುವಂತೆ ಸಮಾಜ ಕಲ್ಯಾಣ ಅಧಿಕಾರಿ ಎನ್ ಎಂ ಹುರಳಿ ವಿನಂತಿಸಿದರು.

ಸರಕಾರಿ ಜಾಗೆ ಇದ್ದಲ್ಲಿ ಪರಿಶೀಲನೆ ‌ಮಾಡಿ ಕಚೇರಿಗೆ ಜಾಗೆಯನ್ನು ನೀಡಲಾಗುವುದು ಎಂದು ತಾ ಪಂ‌ ಇಒ ಎಂ ಎಸ್ ಮೇಟಿ ತಿಳಿಸಿದರು.ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ಇದ್ದರು‌ ಪೂರ್ಣವಾಗಿದೆ ಎಂದು ಮಾಹಿತಿ ನೀಡಿರುವುದಕ್ಕೆ‌ ತಾ ಪಂ ಸದಸ್ಯೆ ಮಂಜುಳಾ ಲಮಾಣಿ ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯಕ್ಷೆ ಸುನೀತಾ ಮೇಲಿನಮನಿ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ,ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ದಾಪೂರಮಠ ಹಾಗೂ ತಾ ಪಂ ಸದಸ್ಯರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

22/09/2020 11:04 am

Cinque Terre

12.61 K

Cinque Terre

0

ಸಂಬಂಧಿತ ಸುದ್ದಿ