ಹುಬ್ಬಳ್ಳಿ: ಹೊಸ ವರ್ಷದ ಸುಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ, ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಇದೇ ಜನ. 1 ರಿಂದ ಬೇಡ ಮದ್ಯಪಾನ ಮಾಡು ಯೋಗ ಧ್ಯಾನ.
ಎಂಬ ಧ್ಯೇಯದೊಂದಿಗೆ ಆನ್ಲೈನ್ ಯೋಗ ಶಿಬಿರವನ್ನು ಪ್ರಾರಂಭಿಸಲಾಗಿದೆ ಎಂದು, ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರಲಾಲ್ ಆರ್ಯ ತಿಳಿಸಿದ್ದಾರೆ.
ಈ ಆನ್ಲೈನ್ ತರಬೇತಿಯಲ್ಲಿ ಸ್ವಾಮಿ ಬಾಬಾ ರಾಮ್ ದೇವ ರಿಂದ ತರಬೇತಿ ನೀಡುತ್ತಿದ್ದು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ಸ್ವದೇಶಿ ಯೋಗ
ಪ್ರಾಣಾಯಾಮ ಧ್ಯಾನ ಅಗ್ನಿ ಹೋತ್ರ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಆರೋಗ್ಯ ಆಯಸ್ಸು ನೆಮ್ಮದಿ ಬದುಕನ್ನು ಹೊಂದುವು ಮೂಲಕ
ಹೊಸ ವರ್ಷ ಸ್ವಾಗತ ಮಾಡೋಣ ಎಂಬ ಉದ್ದೇಶದಿಂದ ಈ ಶಿಬಿರವನ್ನು ಆನ್ಲೈನ್ ಮುಖ್ಯಾಂತರ ನಡೆಸಲಾಗುತ್ತದೆ ಎಂದರು.
Kshetra Samachara
24/12/2020 12:37 pm