ಧಾರವಾಡ: ಜಿಲ್ಲೆಯಾದ್ಯಂತ ಇಂದು ಮತ್ತೆ 1,519 ಜನ ಶಂಕಿತ ಸೋಂಕಿತರಿಂದ ರಕ್ತ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ನೀಡಲಾಗಿದೆ. ಆ ಮೂಲಕ ಇದುವರೆಗೆ ಮಾದರಿ ಸಂಗ್ರಹಿಸಿದವರ ಸಂಖ್ಯೆ 225576 ಕ್ಕೆ ಏರಿಕೆಯಾಗಿದೆ.
ನಿನ್ನೆ ಕಳುಹಿಸಿದ ಮಾದರಿ ಪೈಕಿ 298 ಜನರ ವರದಿ ನೆಗೆಟಿವ್ ಬಂದಿದೆ. 12 ಜನರ ವರದಿ ಪಾಸಿಟಿವ್ ಎಂದು ಬಂದಿದೆ. ಇದರೊಟ್ಟಿಗೆ ಜಿಲ್ಲೆಯಾದ್ಯಂತ ಇನ್ನೂ 417 ಜನರ ವರದಿ ಬರುವುದು ಬಾಕಿ ಉಳಿದಿದೆ.
ಇದುವರೆಗೆ 2,25,576 ಜನರನ್ನು ತಪಾಸಣೆಗೊಳಪಡಿಸಲಾಗಿದ್ದು, ಅದರಲ್ಲಿ 2,24,428 ಜನರ ವರದಿ ನೆಗೆಟಿವ್ ಎಂದು ಬಂದಿದೆ. 21,767 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 21,036 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 606 ಜನ ಸೋಂಕಿನಿಂದ ಮೃತಪಟ್ಟಿದ್ದರೆ, ಬಾಕಿ ಇರುವ 128 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಜಿಲ್ಲೆಯಾದ್ಯಂತ ಒಟ್ಟು 2,27,689 ಜನರ ಮೇಲೆ ನಿಗಾ ಇಡಲಾಗಿದ್ದು, 14,119 ಜನರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 14,397 ಜನ ಈಗಾಗಲೇ 28 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 1,99,045 ಜನ 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
Kshetra Samachara
23/12/2020 11:20 pm