ವರದಿ : ಈರಣ್ಣ ವಾಲಿಕಾರ
ಹುಬ್ಬಳ್ಳಿ- ಕೊರೊನಾ ಇಡೀ ಜಗತ್ತನ್ನು ಭಯದ ನೆರಳಿನಲ್ಲಿ ನಿಲ್ಲಿಸಿದೆ. ವೈದ್ಯರೇ ರೋಗಿಗಳಿಗೆ ಚಿಕಿತ್ಸೆ ನೀಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಇದನ್ನೇ ನಕಲಿ ವೈದ್ಯರುಗಳು ಬಂಡವಾಳ ಮಾಡಿಕೊಂಡು ರೋಗಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ವೈದ್ಯಕೀಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ, ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಸಾವಿನ ದವಡೆಗೆ ಸಿಲುಕಿ ನಲುಗುವಂತಾಗಿದೆ. ಎಂಟನೆ ತರಗತಿ, ಎಸ್‍ಎಸ್‍ಎಲ್‍ಸಿ, ಡಿಪ್ಲೋಮಾ ಪೇಲ್ ಆದವರೂ ಕೂಡ ವೈದ್ಯರು ಎಂದು ಹೇಳಿಕೊಂಡು ತಮ್ಮ ಮನಸ್ಸಿಗೆ ತೋಚಿದ ಔಷಧಿ ಬಳಸಿ ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಅನೇಕ ಹಳ್ಳಿಗಳಲ್ಲಿ ನಕಲಿ ವೈದ್ಯರ ಕಾಟ ಜಾಸ್ತಿ ಆಗಿದ್ದು. ವೈದ್ಯಕೀಯ ಚಿಕಿತ್ಸೆಯ ಕನಿಷ್ಠ ಜ್ಞಾನವೂ ಇಲ್ಲದೆ ಡೈಕ್ಲೋಪೆನಿಕ್, ಡೆಕ್ಸಿಥೋಮೆಸಿನ್,ಯಾಂಟಿ ಅಲರ್ಜಿಕ್, ಔಷಧಿಗಳನ್ನು ಚಿಕಿತ್ಸೆ ಯಲ್ಲಿ ಈ ನಕಲಿ ವೈದ್ಯರು ಬಳಸುತ್ತಿದ್ದು, ಡೋಸೇಜ್‍ನಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕೂಡ ರೋಗಿಗಳ ಪ್ರಾಣಕ್ಕೇ ಸಂಚಕಾರವಾಗುತ್ತಿದೆ. ಸಣ್ಣ ಜ್ವರ, ಕೆಮ್ಮು , ತಲೆನೋವು ಬಂದರೂ ಕೂಡ ರೋಗಿಗಳನ್ನು ದಾಖಲಿಸಿ ಕೊಂಡು, ಚಿಕಿತ್ಸೆ ನೀಡುತ್ತಿರುವುದನ್ನು ಗಮನಿಸಿದರೆ ಸರ್ಕಾರಿ ವೈದ್ಯರನ್ನು ಕೂಡ ನಾಚಿಸು ವಂತಿದೆ. ಆರ್ಥಿಕವಾಗಿ ಹಿಂದುಳಿದ ಜನ ವಾಸಿಸುವ ಪ್ರದೇಶಗಳೇ ನಕಲಿ ವೈದ್ಯರ ಆವಾಸ ಸ್ಥಾನವಾಗಿದೆ...
ಗ್ರಾಮೀಣ ಭಾಗದಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅಂತವರ ಮೇಲೆ ಕ್ರೀಮಿನಲ್ ದಾಖಲಿಸಲಾಗುತ್ತಿದೆ. ಸಾರ್ವಜನಿಕರು ಕೂಡ ನಕಲಿ ವೈದ್ಯರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡವ ಮೂಲಕ ಇಂತ ನಕಲಿ ವೈದ್ಯರಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ.....!
Kshetra Samachara
18/12/2020 03:41 pm