ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಟೇಸ್ಟಿಂಗ್ ಪೌಡರ್ ನಿರ್ಮೂಲನೆಗೆ 31 ಜಿಲ್ಲೆಗಳ ರ್ಯಾಲಿಗೆ ಸಿದ್ದರಾದ ಸಂಸ್ಕಾರ ಫೌಂಡೇಶನ್

ಹುಬ್ಬಳ್ಳಿ: ಇತ್ತಿಚಿನ ದಿನಗಳಲ್ಲಿ ಫಾಸ್ಟ್ ಫುಡ್ ಹಾವಳಿ ಹೆಚ್ಚಾಗಿದ್ದು, ನಿರಂತರವಾಗಿ ಹು-ಧಾ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಅದೇ ರೀತಿಯಾಗಿ ಸಂಸ್ಕಾರ ಫೌಂಡೇಶನ್ ಸದಸ್ಯರಾದ ಲಕ್ಷ್ಮಣ ಕುಲ್ಕರ್ಣಿ, ಮಂಜುನಾಥ ಎಂಬುವವರು ಹು-ಧಾ ದಲ್ಲಿ ಫಾಸ್ಟ್ ಫುಡ್ ಗಳ ಮಳಗಿಗೆ ಹೋಗಿ ಅದೇಷ್ಟೋ ಟೇಸ್ಟಿಂಗ್ ಪೌಡರನ್ನು ಹಿಡಿದು ಜನರಿಗೆ ಅರಿವು ಮೂಡಿಸಿದ್ದರು. ಈಗ ಅವರು ಮೊತ್ತುಂದು ಹೆಜ್ಜೆ ಮುಂದಿಡುತ್ತಿದ್ದಾರೆ..

ಸಧ್ಯ ಇವರು ಕರ್ನಾಟಕದ ಸುಮಾರು 31 ಜಿಲ್ಲೆಗಳಿಗೆ 45 ದಿನಗಳ ಕಾಲ ಭೇಟಿಕೊಟ್ಟು, ಎಲ್ಲರಲ್ಲು ಟೇಸ್ಟಿಂಗ್ ಪೌಡರ್ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ಅರಿವು ಮೂಡಿಸಲು,

ಇಂದು ಹುಬ್ಬಳ್ಳಿಯಲ್ಲಿ ಹೊಟೇಲ್ ಸಂಗದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಅವರ ಹತ್ತಿರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜನವರಿ ತಿಂಗಳಲ್ಲಿ ರ್ಯಾಲಿ ಹೊಗಲು ಸಿದ್ದರಾಗುತ್ತಿರುವ ಲಕ್ಷ್ಮಣ ಕುಲಕರ್ಣಿ ಮತ್ತು ಮಂಜುನಾಥ ಅವರಿಗೆ ಎಲ್ಲರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ...

Edited By : Manjunath H D
Kshetra Samachara

Kshetra Samachara

17/12/2020 04:46 pm

Cinque Terre

19.26 K

Cinque Terre

1

ಸಂಬಂಧಿತ ಸುದ್ದಿ