ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬೇಡ್ಕರ್ ಪರಿನಿರ್ವಾಣ ದಿನ 17 ಜನ ನೇತ್ರದಾನಕ್ಕೆ ಆರೋಗ್ಯ ಇಲಾಖೆಗೆ ಪತ್ರ

ಅಣ್ಣಿಗೇರಿ : ನಿನ್ನೆಯ ದಿನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ನಾವು ನಿವೇಲ್ಲರೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ಸಮರ್ಪಿಸಿ ದೀಪ ಬೆಳಗಿಸಿ ಆಚರಿಸಿ ಅವರಿಗೆ ಗೌರವ ಸಲ್ಲಿಸಿದ್ದೇವೆ ಅಲ್ವೇ.

ಆದರೆ ಇಲ್ಲೊಂದು ಗ್ರಾಮದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ನೇತ್ರದಾನ ಮಾಡಿ ಆಚರಿಸಿದ್ದಾರೆ. ಅಂಬೇಡ್ಕರ್ ಪರಿನಿರ್ವಾಣ ದಿನ ಅಂಗವಾಗಿ ಅಂಬೇಡ್ಕರ್ ಭಾವಚಿತ್ರದ ಮುಂದೆ ನಿಂತು ನೇತ್ರದಾನಕ್ಕೆ ಸ್ವ ಇಚ್ಚೆಯಿಂದ ಒಪ್ಪಿಗೆ ಕೋರಿ ಪತ್ರವನ್ನು ಬರೆದುಕೊಟ್ಟು ವಿಶೇಷವಾಗಿ ಆಚರಿಸಿದ್ದಾರೆ.

ಹೌದು ! ಒಂದಲ್ಲ ಎರಡಲ್ಲ ಬರೋಬ್ಬರಿ 17 ಜನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಣ್ಣಿಗೇರಿ ತಾಲೂಕು ಸಮಿತಿಯ ಪ್ರೋ. ಬಿ.ಕೃಷ್ಣಪ್ಪ ಸ್ಥಾಪಿತ ತಾಲೂಕು ಪದಾಧಿಕಾರಿಗಳು ಮತ್ತು ಗ್ರಾಮದ ಪದಾಧಿಕಾರಿಗಳು ಹಾಗೂ ನಗರ ಪದಾಧಿಕಾರಿಗಳು ಸೇರಿ ದಾನದಲ್ಲಿ ಶ್ರೇಷ್ಠವಾದ ದಾನ ನೇತ್ರದಾನ ಮಾಡಿ ಅಂದರ ಬಾಳಿಗೆ ಬೆಳಕಾಗಲೇಂದು ದಿಟ್ಟ ನಿರ್ಧಾರ ಕೈಗೊಂಡು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇವರ ಈ ಕಾರ್ಯಕ್ಕೆ ಇಡೀ ಅಣ್ಣಿಗೇರಿ ತಾಲೂಕು ಮೆಚ್ಚುಗೆ ವ್ಯಕ್ತಪಡಿಸಿ ಹರಿಸಿ ಹಾರೈಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/12/2020 07:39 pm

Cinque Terre

19.34 K

Cinque Terre

1

ಸಂಬಂಧಿತ ಸುದ್ದಿ