ನವಲಗುಂದ : ಪೌರಾಡಳಿತ ಇಲಾಖೆ, ನವಲಗುಂದ ಪುರ ಸಭೆ ವತಿಯಿಂದ ಒಟ್ಟು ಆರು ದಿನಗಳವರೆಗೆ ಸಕಾಲ ಸಪ್ತಾಹ ನಡೆಸಲಾಗುತ್ತಿದ್ದು, ಮಂಗಳವಾರ ಪುರಸಭೆಯ ಮುಖ್ಯಾಧಿಕಾರಿಗಳಾದ ಎನ್ ಎಚ್ ಖುದಾನವರ್, ಅಧ್ಯಕ್ಷರಾದ ಮಂಜುನಾಥ್ ಜಾದವ ಸೇರಿದಂತೆ ಸಿಬ್ಬಂದಿಗಳು ಪಟ್ಟಣದ ಹಲವೆಡೆ ಸಂಚರಿಸಿ ಜನರಿಗೆ ಸಕಾಲ ಸಪ್ತಾಹದ ಅರಿವು ಮೂಡಿಸಿದರು.
ಇನ್ನೂ ನವೆಂಬರ್ 30 ರಿಂದ ಡಿಸೆಂಬರ್ 5 ರ ವರೆಗೆ ಈ ಸಕಾಲ ಸಪ್ತಾಹ ಸೇವೆ ಜಾರಿಯಲ್ಲಿದೆ. ಮತ್ತು ಪುರಸಭೆಯಲ್ಲಿ ಒಟ್ಟು 12 ಸೇವೆಗಳು ಇದ್ದು ಅವು ಈರೀತಿಯಾಗಿವೆ, ಜನನ ಮರಣ ಪ್ರಮಾಣ ಪತ್ರ, ವ್ಯಾಪಾರ ಹಾಗೂ ಉದ್ದಿಮೆ ಪರವಾನಿಗೆ ಪತ್ರ, ಖಾತಾ ಉತಾರ ಕಟ್ಟಡ ಪರವಾನಿಗೆ, ನಳ ಸಂಪರ್ಕ, ಖಾತೆ ಬದಲಾವಣೆ, ಕಟ್ಟಡ ಸ್ವಾಧಿನಾನುಭಾವ ಪ್ರಮಾಣ ಪತ್ರ, ವ್ಯಾಪಾರ ಹಾಗೂ ಉದ್ದಿಮೆ ಪರವಾನಿಗೆ ನವೀಕರಣ, ವಿದ್ಯುತ್ ಸಂಪರ್ಕಕ್ಕಾಗಿ ರಸ್ತೆ ಕಟಿಂಗ್, ಓ ಎಫ್ ಸಿ ರಸ್ತೆ ಕಟಿಂಗ್, ಗ್ಯಾಸ್ ಪೈಪ್ ಲೈನ್ ರಸ್ತೆ ಕಟಿಂಗ್, ಬೋರ್ ವೆಲ್ ಅನುಮತಿ ಈ ಹನ್ನೆರಡು ಸೇವೆಗಳು ನವಲಗುಂದ ಪುರಸಭೆಯಲ್ಲಿ ಸಿಗುತ್ತಿದ್ದು, ಈ ಎಲ್ಲಾ ಸೇವೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿಗಳಾದ ಎನ್ ಎಚ್ ಖುದಾನವರ್ ತಿಳಿಸಿದರು.
Kshetra Samachara
01/12/2020 03:00 pm