ಧಾರವಾಡ: ದೇಶದ ಬೇರೆ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕೋವಿಡ್-19 ಎರಡನೇ ಹಂತದ ಅಲೆ ಆರಂಭವಾಗಿರುವ ಬಗೆಗೆ ವೈದ್ಯರು ಆತಂಕ ವ್ಯಕ್ತ ಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಕುರಿತ ಜನ ಜಾಗೃತಿ ಮತ್ತು ಸೂಕ್ತ ಪರೀಕ್ಷೆಗೆ ಕ್ರಮಕೈಗೊಂಡಿದ್ದರೂ ಸಾರ್ವಜನಿಕರು ಉದಾಸೀನತೆಯಿಂದ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಸಂಚರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಸಮಾಧಾನ ಹೊರ ಹಾಕಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಇಂದು ಸಂಜೆ ಕೋವಿಡ್ ನಿರ್ವಹಣೆಯ ಜಿಲ್ಲಾ ಆರೋಗ್ಯ ಕಾರ್ಯಪಡೆಯ ಸಭೆ ಜರುಗಿಸಿ ಮಾತನಾಡಿ ಅವರು, ಜಿಲ್ಲೆಯಲ್ಲಿ ಈಗಾಗಲೇ ಮಾಸ್ಕ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಆರಂಭಿಸಲಾಗಿದ್ದು ನಿನ್ನೆ (ನ.26) ವಿಶೇಷ ಕಾರ್ಯಾಚರಣೆ ಸೇರಿದಂತೆ ಒಟ್ಟು 2700ಕ್ಕೂ ಹೆಚ್ಚು ಜನರಿಗೆ ಕೋವಿಡ್ ಪರೀಕ್ಷೆ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗಿದೆ. ಕಾರ್ಯಾಚರಣೆ ತಂಡಗಳು ಪ್ರತಿ ದಿನ ಮಾರುಕಟ್ಟೆ ಪ್ರದೇಶ, ಕಾಲೇಜು, ಕಾರಾಗೃಹ, ಬಸ್ ನಿಲ್ದಾಣ ಸೇರಿದಂತೆ ಜನನಿಬೀಡ ಪ್ರದೇಶಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಬೇಕು ಮತ್ತು ಅವರಿಗೆ ಕೋವಿಡ್ ಪರೀಕ್ಷೆ ಮಾಡಬೇಕೆಂದು ಸೂಚಿಸಿದರು.
ಡಿಮಾನ್ಸ್, ಕಿಮ್ಸ್ ಮತ್ತು ಎಸ್‍ಡಿಎಂ ಆಸ್ಪತ್ರೆಗಳು ಕೊರೊನಾ ಪರೀಕ್ಷೆಯ ನೆಗಟಿವ್ ವರಿದಿಯನ್ನು ಸಂಬಂಧಿಸಿದವರಿಗೆ ತಕ್ಷಣ ನೀಡಲು ಕ್ರಮಕೈಗೊಳ್ಳಬೇಕು ಮತ್ತು ಎಸ್‍ಡಿಎಂ ಆಸ್ಪತ್ರೆಯಿಂದ ಕೋವಿಡ್ ಸಾವು ಪ್ರಕರಣಗಳ ವರದಿಯು ಸಕಾಲಕ್ಕೆ ಬರದೇ ವಿಳಂಬವಾಗುತ್ತಿದೆ. ಎಸ್‍ಡಿಎಂ ಆಸ್ಪತ್ರೆಯ ಅಧಿಕ್ಷಕರು ಆಯಾ ದಿನದ ವರದಿಗಳನ್ನು ತಕ್ಷಣ ಸಲ್ಲಿಸಬೇಕು. ಕೊರೊನಾ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ಸರಿಯಾದ ವಿಳಾಸ ಮತ್ತು ಅವರ ಸ್ವಂತ ಜಿಲ್ಲೆಯ ವಿವರಗಳನ್ನು ನಿಗದಿತ ನಮೂನೆಯಲ್ಲಿ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
Kshetra Samachara
27/11/2020 08:05 pm