ಹುಬ್ಬಳ್ಳಿ: ಅದು ಕಿಲ್ಲರ್ ಮಹಾಮಾರಿ ರೋಗ.ಈ ರೋಗ ಬಂದಿದ್ದೆ ಬಂದಿದ್ದು,ಜನರು ಅಕ್ಷರಶಃ ನರಕಯಾತನೆ ಅನುಭವಿಸಿದ್ದಾರೆ.ಇನ್ನೂ ಸಹಜವಾಗಿ ಅನಾರೋಗ್ಯ ಉಂಟಾದರು ಕೂಡ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಇಂತಹ ಸಮಸ್ಯೆ ಬಗೆಹರಿಸಲು ಶಾಸಕರೊಬ್ಬರು ಸೂಕ್ತ ನಿರ್ಧಾರವನ್ನು ಕೈಗೊಂಡಿದ್ದು,ವಿನೂತನ ಪ್ರಯೋಗ ನಡೆಸಿದೆ.ಇದರಿಂದ ಸಮಸ್ಯೆಗೆ ಕೊಂಚ ಮಟ್ಟಿಗೆ ನಿರಾಳತೆ ಬಂದಂತಾಗಿದೆ. ಏನಿದು ಪ್ರಯೋಗ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್...
ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಜನರು ಹೊರಗೆ ಬರಲು ಕೂಡ ಹೆದರುವಂತಾಗಿತ್ತು. ಅಲ್ಲದೇ ಕೋವಿಡ್ ನಿಂದಾಗಿ ರೋಗಿಗಳು ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿತ್ತು.ಈಗ ರೋಗಿಗಳಿಗೆ ಆನ್‌ಲೈನ್ ಚಿಕಿತ್ಸೆ ಒದಗಿಸಲು ಶಾಸಕ ಅರವಿಂದ ಅವರು ಡಿಜಿಟಲ್ ಪ್ರಯೋಗ ಕೈಗೆತ್ತಿಕೊಂಡಿದ್ದಾರೆ.'ಆರೋಗ್ಯ ಬಂದು' ಆ್ಯಫ್ ಮುಖಾಂತರ ತಜ್ಞ ಹಾಗೂ ಸಾಮಾನ್ಯ ವೈದ್ಯರಿಂದ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ನಿರ್ಧರಿಸಿದ್ದು,ಈ ಆ್ಯಪ್ ಮೂಲಕ ರೋಗಿಗಳು ತಮ್ಮ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ವೈದ್ಯರ ತಂಡ ಕೂಡ ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ಚಿಕಿತ್ಸೆ ಮತ್ತಷ್ಟು ಅಧುನಿಕ ಹಾಗೂ ತಂತ್ರಜ್ಞಾನದ ಟಚ್ ಪಡೆದುಕೊಳ್ಳಲಿದೆ.ಅಲ್ಲದೇ ರೋಗಿಯು ತನ್ನ ಸ್ಮಾರ್ಟ್ ಪೋನ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ನಂಬರ,ಹೆಸರು ಸೇರಿದಂತೆ ಇತರ ಮಾಹಿತಿ ನಮೂದಿಸಿದರೇ ವೈದ್ಯರು ವಿಡಿಯೋ ಕಾಲ್ ಮೂಲಕ ಚಿಕಿತ್ಸೆಯ ಮಾಹಿತಿ ನೀಡುತ್ತಾರೆ.ಇನ್ನೂ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಚಿಕಿತ್ಸೆ ಕೂಡ ನೀಡುತ್ತಾರೆ.ಈ ಆ್ಯಫ್ ಗೆ ಇಂದು ಶಾಸಕ ಅರವಿಂದ ಬೆಲ್ಲದ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಒಟ್ಟಿನಲ್ಲಿ ಸಾರ್ವಜನಿಕರ ಭಯವನ್ನು ದೂರಸರಿಸಿ ತಾವು ಇದ್ದ ಸ್ಥಳದಿಂದಲೇ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು,ಈ ಯೋಜನೆ ಸಾರ್ವಜನಿಕ ವಲಯಕ್ಕೆ ಸಾಕಷ್ಟು ಲಾಭ ನೀಡಲಿದೆ.ಆದರೇ ಇದರ ನಿರ್ವಹಣೆ ಉತ್ತಮ ರೀತಿಯಲ್ಲಿ ಆಗುವ ಮೂಲಕ ಸಾರ್ವಜನಿಕರಿಗೆ ಸೇವೆ ದೊರೆಯಬೇಕಿದೆ.
Kshetra Samachara
24/11/2020 04:27 pm