ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನ. 23 ರಿಂದ 30 ವರೆಗೆ ಶ್ವಾಸಕೋಶ ಜಾಗೃತಿ, ಉಚಿತ ತಪಾಸಣಾ ಶಿಬಿರ

ಹುಬ್ಬಳ್ಳಿ: ಶ್ವಾಸಕೋಶ ಕ್ಯಾನ್ಸರ್ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರವನ್ನು ಇದೇ ದಿನಾಂಕ 23 ರಿಂದ 30 ರವರೆಗೆ ಎಚ್.ಸಿ.ಜಿ. ಆರ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಡಾ. ವಿನಯಕುಮಾರ್ ಮುತ್ತಗಿ ತಿಳಿಸಿದರು.

ಧೂಮಪಾನ, ದಟ್ಟ ವಾಹನಗಳ ಹೊಗೆಯಿಂದ, ಧೂಳಿನಿಂದಾಗಿ ಶ್ವಾಸಕೋಶ ಕ್ಯಾನ್ಸರ್ ಉಂಟಾಗುತ್ತದೆ ಎಂದ ಅವರು ಆರಂಭಿಕ ಮಟ್ಟದಲ್ಲಿದ್ದರೆ ಮಾತ್ರ ಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಾ. ರುದ್ರೇಶ ತಬಾಲಿ ಮಾತನಾಡಿ ಶ್ವಾಸಕೋಶ ಕ್ಯಾನ್ಸರ್ ರೋಗದ ಲಕ್ಷಣಗಳಾದ ಕೆಮ್ಮು, ಎದೆನೋವು ಕಾಣಿಸುವುದು, ಉಸಿರಾಟದ ತೊಂದರೆ, ಆಯಾಸ ಮತ್ತು ದೇಹ ದೌರ್ಬಲ್ಯ, ಹೊಟ್ಟೆ ಹಸಿವಾಗದಿರುವಿಕೆ ಜೊತೆಗೆ ದೇಹದ ತೂಕ ತಗ್ಗುವುದು ಅಲ್ಲದೇ ಮೆಟಾಸ್ಟ್ಯಾಟಿಕ್ ಕಾಯಿಲೆ ಲಕ್ಷಣಗಳು ಸೇರಿದಂತೆ ಇನ್ನಿತರರ ಲಕ್ಷಣಗಳನ್ನು ಒಳಗೊಂಡಿರುವವರು ಉಚಿತ ತಪಾಸಣಾ ಶಿಬಿರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು....

Edited By :
Kshetra Samachara

Kshetra Samachara

18/11/2020 11:55 am

Cinque Terre

20.18 K

Cinque Terre

1

ಸಂಬಂಧಿತ ಸುದ್ದಿ