ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕಾಲೇಜು ಆರಂಭ: ಕವಿವಿಯಲ್ಲಿ ಪ್ರತ್ಯೇಕ ಕೋವಿಡ್ ಟೆಸ್ಟ್ ಸೆಂಟರ್

ಧಾರವಾಡ : ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಎಂಟು ತಿಂಗಳುಗಳಿಂದ ಮುಚ್ಚಿದ ಪದವಿ ಕಾಲೇಜುಗಳು ಆರಂಭಕ್ಕೆ ಸರ್ಕಾರ ಇಂದಿನಿಂದ ಗ್ರೀನ್ ಸಿಗ್ನಲ್ ನೀಡಿದೆ. ಇಂದಿನಿಂದ ಕಾಲೇಜಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಬೇಕು ನಿಯಮದ ಹಿನ್ನೆಲೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋವಿಡ್ ತಪಾಸಣೆ ಕೇಂದ್ರ ಸ್ಥಾಪಿಸಿ ಮೊದಲ ದಿನವಾದ ಇಂದು ಒಟ್ಟು 251 ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ಮಾಡಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಜೊತೆಗೆ ನೋಡಲ್ ಆಫೀಸರ್ ಡಾ.ವೇದಮೂರ್ತಿ ಮಾತನಾಡಿ,ಕರ್ನಾಟಕ ವಿಶ್ವವಿದ್ಯಾಲಯ ಕೋವಿಡ್ ಸೆಲ್ ವತಿಯಿಂದ ಇಂದಿನಿಂದ ನಾಲ್ಕು ದಿನ ನಡೆಯುವ ಕೋವಿಡ್ ಟೆಸ್ಟ್‌ ಕ್ಯಾಪ್ ಏರ್ಪಡಿಸಿದೆ.ಉಚಿತವಾಗಿ ಪರೀಕ್ಷೆ ಮಾಡಿ,ಯಾರಿಗಾದರೂ ರೋಗ ಲಕ್ಷಣಗಳನ್ನು ಕಂಡು ಬಂದರೆ.ಅಂತವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.ಸಿಬ್ಬಂದಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಕಾಲೇಜಿಗೆ ಆಗಮಿಸುವ ಪ್ರತಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳಿಗೆ ಕಡ್ಡಾಯ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಡಿಸಲಾಗಿದೆ. ಅಲ್ಲದೇ, ಪರೀಕ್ಷೆ ನಂತರ ನಕಾರಾತ್ಮಕ (ನೆಗೆಟಿವ್) ವರದಿ ಬಂದವರಿಗೆ ಮಾತ್ರವೇ ತರಗತಿಗಳಿಗೆ ಅವಕಾಶ ನೀಡುವುದು ಕಂಡು ಬಂದಿತು.

Edited By :
Kshetra Samachara

Kshetra Samachara

17/11/2020 06:02 pm

Cinque Terre

48.54 K

Cinque Terre

1

ಸಂಬಂಧಿತ ಸುದ್ದಿ