ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹೂವಾಡಗಿತ್ತಿಗೆ ನೆರವಾದ ಚೇತನ್ ಬಿಜಿನೆಸ್ ಸ್ಕೂಲ್ ನೇತ್ರ ತಪಾಸಣೆ ಶಿಬಿರ

ಹುಬ್ಬಳ್ಳಿ : ಧಾರವಾಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ನಿರ್ಮಲಾ ಫೌಂಡೇಶನ್, ಡಾಕ್ಟರ್ ಎಂ ಎಂ ಜೋಶಿ ನೇತ್ರವಿಜ್ಞಾನ ಸಂಸ್ಥೆ, ವಿಶ್ವ ಮಧ್ವ ಮಹಾಪರಿಷತ್ ಶ್ರೀಗುರು ಮಹಿಪತಿ ರಾಜ್ ನೇತ್ರ ಸೇವಾಸಂಸ್ಥೆ ಇ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಇಲ್ಲಿಯ ಚೇತನ್ ಬಿಸಿನೆಸ್ ಸ್ಕೂಲ್ ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿ ರುದ್ರಾಕ್ಷಿ ಮಠ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಮಾಜಿ ಶಿಕ್ಷಣ ಮಂತ್ರಿ ಬಸವರಾಜ್ ಹೊರಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಶ್ರೀನಗರ,ಉಣಕಲ್, ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಾಗಿ ವೃದ್ಧರೆ ಪಾಲ್ಗೊಂಡು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಡಾಕ್ಟರ್ ತಮ್ಮಣ್ಣ ಮತ್ತು ಸಿಬ್ಬಂದಿ ಅಚ್ಚುಕಟ್ಟಾಗಿ ಶಿಬಿರ ನಿರ್ವಹಿಸಿದರು.

ಧಾರವಾಡದಿಂದ ದಿನವೂ ಹುಬ್ಬಳ್ಳಿ ದುರ್ಗದಬೈಲಿನಲ್ಲಿ ಹೂವನ್ನು ಮಾರುತ್ತಿರುವ 75 ವರ್ಷದ ಪಾರ್ವತಮ್ಮ, ಬಡತನದದಿಂದಾಗಿ ಕಣ್ಣಿಗೆ ಪೊರೆ ತಪಾಣೆ ಮಾಡಿಸಿಕೊಳ್ಳಲು ಸಾಧ್ಯವಾಗದೆ ಬಳಲುತ್ತಿದ್ದಳು. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಈರಣ್ಣ ಕಾಡಪ್ಪನವರ, ಅಜ್ಜಿಗೆ ಶಿಬಿರದ ವಿವರಣೆಯನ್ನು ಕೊಟ್ಟಾಗ ಒಂದು ದಿನದ ಹೂವಿನ ವ್ಯಾಪಾರ ಬಿಟ್ಟು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ತಪಾಸಣೆ ಮಾಡಲಾಗಿ ಒಂದು ಕಣ್ಣಿಗೆ ಪೊರೆ ಬಂದಿದೆ ಎಂದು 17ನೇ ತಾರೀಕು ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡುವುದಾಗಿ ಡಾಕ್ಟರ ಹೇಳಿದಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಧನ್ಯತಾಸಭಾವ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇಂಥ ಎಷ್ಟೋ ಜನರ ಭಾವನೆಗೆ ಈ ಶಿಬಿರ ಸಾಕ್ಷಿಯಾಯಿತು.

ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ನೂರಾರು ಜನ ನೇತ್ರ ಪರೀಕ್ಷೆ ಮಾಡಿಸಿಕೊಂಡರು.

ಸುಮಾರು ಎರಡು ನೂರು ಜನಕ್ಕೆ,ಚಿಕಿತ್ಸೆ, ಮಾರ್ಗದರ್ಶನ, ಔಷಧ, ಸಾಂತ್ವನ ಈ ಶಿಬಿರದಿಂದ ಉಚಿತ ಉಚಿತ ದೊರೆಯಿತು. ಕಳೆದ 15 ವರ್ಷಗಳಿಂದಲೂ ಇಂತಹ ಅಂಧತ್ವ ನಿವಾರಣಾ ಶಿಬಿರವನ್ನು ರಾಜಣ್ಣ ಕೊರವಿ ಯವರು ನಡೆಸುತ್ತಾ ಬಂದಿದ್ದಾರೆ ಅಷ್ಟೇ ಅಲ್ಲದೆ ಬಡವರಿಗೆ ಕಣ್ಮಣಿಯಾಗಿದ್ದಾರೆ ತಾಯಿಯವರ ಹೆಸರಿನಿಂದ ನಡೆಸುತ್ತಿರುವ ನಿರ್ಮಲ ಫೌಂಡೇಶನ್ನಿನ ಈ ಕಾರ್ಯ ಶ್ಲಾಘನೀಯ ಅಷ್ಟೇ ಅಲ್ಲ ಅನುಕರಣೀಯ ಅಲ್ಲವೇ?

ವರದಿ : ಈರಣ್ಣ ಎಸ್. ಕಾಡಪ್ಪನವರ. ಯೋಗ ಮತ್ತು ಸ್ಕೇಟಿಂಗ್ ಶಿಕ್ಷಕರು ಹುಬ್ಬಳ್ಳಿ. ಮೊಬೈಲ್ 98450 52647

Edited By :
Kshetra Samachara

Kshetra Samachara

08/11/2020 08:15 pm

Cinque Terre

28.47 K

Cinque Terre

3

ಸಂಬಂಧಿತ ಸುದ್ದಿ