ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕೊವಿಡ್-19 ಕುರಿತು ನಗರದಲ್ಲಿ ಆರೋಗ್ಯ ಜಾಗೃತಿ ಜನಾಂದೋಲನ

ಧಾರವಾಡ : ನಗರ ಪ್ರದೇಶದ ಸಾರ್ವಜನಿಕರಲ್ಲಿ ಕಡ್ಡಾಯ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಕೈಗಳನ್ನು ಸರಿಯಾಗಿ ತೊಳೆಯುವ ವಿಧಾನಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕ,ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿದ ಸೂಕ್ತ ನಿರ್ದೇಶನಗಳನ್ನು ಅನುಸರಿಸುವ ಮೂಲಕ ದೇಶ ಮತ್ತು ಜಿಲ್ಲೆಯನ್ನು ಕೊರೋನ ಮುಕ್ತಗೊಳಿಸಲು ಸಹಕರಿಸಬೇಕು ಎಂದು ಧಾರವಾಡ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ಅನುಷಾ. ಜಿ. ಹೇಳಿದರು.

ನಗರದಲ್ಲಿಂದು ಭಾರತ ಸರ್ಕಾರದ ನಿರ್ದೇಶನದಂತೆ ಧಾರವಾಡ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಜತೆಗೂಡಿ ಹಮ್ಮಿಕೊಂಡಿರುವ ಕೊರೋನಾ ಅರಿವು ಅಭಿಯಾನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು.

ನಾಗರಿಕರು ಕೊರೋನಾ ಸಾಂಕ್ರಾಮಿಕ ರೋಗದವನ್ನು ನಿರ್ಲಕ್ಷ್ಯ ಮಾಡದೆ, ರೋಗ ಹರಡದಂತೆ ಸರ್ಕಾರ ಜಾರಿಗೊಳಿಸಿದ ಸೂಕ್ತ ನಿರ್ದೇಶನಗಳನ್ನು ಅನುಸರಿಸುವ ಮೂಲಕ ದೇಶ ಮತ್ತು ಜಿಲ್ಲೆಯನ್ನು ಕೊರೋನ ಮುಕ್ತಗೊಳಿಸಲು ಸಹಕರಿಸಬೇಕು ಎಂದರು.

ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದೀನಕರ ಬೋಧಿಸಿದರು. ಕ್ಷೇತ್ರ ಜನಸಂಪರ್ಕ ಇಲಾಖೆಯ ಸಹಾಯಕರಾದ ಮುರಳೀಧರ ಕಾರಭಾರಿ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ:ಸುಜಾತಾ ಹಸವಿಮಠ, ಆರ್.ಎಮ್.ಕುಲಕರ್ಣಿ, ಡಾ.ಶಶಿ ಪಾಟೀಲ, ಡಾ.ಶುಭಾ ಮೂಲಿಮನಿ,ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

03/11/2020 08:10 pm

Cinque Terre

27.07 K

Cinque Terre

1

ಸಂಬಂಧಿತ ಸುದ್ದಿ