ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋರೊನಾ ಸೋಂಕಿತರಿಗಿಂತ ಗುಣಮುಖರೇ ಹೆಚ್ಚು: ಕಿಮ್ಸ್ ನಲ್ಲಿ ಶೇ 50 ರಷ್ಟು ಬೆಡ್ ಖಾಲಿ ಖಾಲಿ

ಹುಬ್ಬಳ್ಳಿ: ಇಷ್ಟು ದಿನ ಕೊರೋನಾದ ಆತಂಕದಲ್ಲಿದ್ದ ಜನರಿಗೆ ಈಗ ಗುಡ್ ನ್ಯೂಸ್ ಒಂದು‌ ಕೇಳಿಬಂದಿದೆ. ಜಿಲ್ಲೆಯಲ್ಲಿ ದಿನಕ್ಕೆ ದ್ವಿಶತಕ, ತ್ರಿ‌ಶತಕ ಭಾರಿಸುತ್ತಿದ್ದ ಕೋರೊನಾ ಹಾವಳಿ ತಗ್ಗಿದ್ದು,ಅಕ್ಟೋಬರ್‌ನಲ್ಲಿ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಅಧಿಕವಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡ ಪರಿಣಾಮ ಕಿಮ್ಸ್ ಆಸ್ಪತ್ರೆಯಲ್ಲಿ ಶೇ 50ರಷ್ಟು ಬೆಡ್‌ಗಳು ಖಾಲಿಯಾಗಿವೆ.ಅಲ್ಲದೇ ಹುಬ್ಬಳ್ಳಿಯ ಆಯುರ್ವೇದ ಆಸ್ಪತ್ರೆಗಳು ಸೇರಿದಂತೆ ಕೆಲ ಕೋವಿಡ್‌ ಕೇರ್‌ ಕೇಂದ್ರಗಳನ್ನು ರದ್ದು ಮಾಡಲಾಗಿದೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ 6,101ಸೋಂಕಿತರು ಪತ್ತೆಯಾಗಿದ್ದು, 5,587 ಜನ ಗುಣಮುಖರಾಗಿದ್ದಾರೆ. ಅಕ್ಟೋಬರ್‌ನಲ್ಲಿ 3,117 ಸೋಂಕಿತರು ಪತ್ತೆಯಾಗಿದ್ದು, 5,149 ಜನ ಗುಣಮುಖರಾಗಿದ್ದು,ಕೊರೋನಾ ಹಾವಳಿ ತಗ್ಗಿದಂತಾಗಿದೆ.

ಮಾರ್ಚ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಳಿಕ ನಿತ್ಯ 10–20ಪ್ರಕರಣಗಳು ವರದಿಯಾಗುತ್ತಿದ್ದವು. ಕ್ರಮೇಣ ಈ ಸಂಖ್ಯೆ ಹೆಚ್ಚಳವಾಗಿತ್ತು. ಒಂದೇ ದಿನ 300ರಿಂದ 400 ಪ್ರಕರಣಗಳು ವರದಿಯಾದ ಉದಾಹರಣೆಯೂ ಇದೆ. ಆದರೆ, ಕಳೆದ ಎರಡು ತಿಂಗಳುಗಳಿಂದ ಸೋಂಕಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದ್ದು,ಧಾರವಾಡ ಜಿಲ್ಲೆಯ ಜನರು ನೆಮ್ಮದಿ ನಿಟ್ಟುಸಿರು ಬಿಟ್ಟಂತಾಗಿದೆ.

Edited By : Manjunath H D
Kshetra Samachara

Kshetra Samachara

02/11/2020 03:27 pm

Cinque Terre

42.14 K

Cinque Terre

4

ಸಂಬಂಧಿತ ಸುದ್ದಿ