ಹುಬ್ಬಳ್ಳಿ: ಕೋವಿಡ್ ವಿರುದ್ಧ ಹೋರಾಟದಲ್ಲಿ ತನ್ನದೇ ಆದ ಸಾಧನೆಯ ಮೂಲಕ ಹಲವಾರು ಯಶಸ್ವಿ ಚಿಕಿತ್ಸೆ ನೀಡಿ ಹೆಸರು ಮಾಡಿರುವ ಕಿಮ್ಸ್ ಆಸ್ಪತ್ರೆ ಮತ್ತೊಂದು ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ರಾಜ್ಯದಲ್ಲಿಯೇ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆ,101 ಕೋವಿಡ್ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆಯಂತಹ ಕಾರ್ಯವನ್ನು ಮಾಡಿರುವ ಕಿಮ್ಸ್ ಕೋರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿರುವ ಸಂದರ್ಭದಲ್ಲಿ ಆಗಸ್ಟ್ ತಿಂಗಳವರೆಗೆ 546 ರೋಗಿಗಳಿಗೆ ಅರ್ಥೋಪೆಡಿಕ್ ಚಿಕಿತ್ಸೆ ನೀಡುವ ಮೂಲಕ ಮತ್ತೊಂದು ಮಹತ್ವದ ಕಾರ್ಯವನ್ನು ಕಿಮ್ಸ್ ಮಾಡಿದೆ.ಅಲ್ಲದೇ 25 ಕೋವಿಡ್ ಸೋಂಕಿತರಿಗೆ ಅರ್ಥೋಪೆಡಿಕ್ ಚಿಕಿತ್ಸೆ ನೀಡಿದೆ.
Kshetra Samachara
18/10/2020 01:12 pm