ಕುಂದಗೋಳ : ಎಲ್ಲೇಡೆ ಕೊರೊನಾ ಮಹಾಮಾರಿ ಅವಾಂತರ ತಲೆದೋರಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರಲ್ಲಿನ ಕೊರೊನಾ ಕುರಿತಾದ ಮಾನಸಿಕತೆ ದೂರಮಾಡಲು ಪಟ್ಟಣದ ಕಾನೂನು ಸೇವಾ ಸಮಿತಿ, ಸಾರ್ವಜನಿಕ ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ವಕೀಲರು ಸಂಘದ ಆಶ್ರಯದಲ್ಲಿ ಕೊರೊನಾ ವೈರಸ್ ಬಗ್ಗೆ ಜನ ಆಂದೋಲನ ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಾಧೀಶೆ ಶೈನಿ ಕೆ.ಎಂ ಚಾಲನೆ ನೀಡಿದರು.
ಪಟ್ಟಣದ ಪಂಚಾಯಿತಿ ಅಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೊರೊನಾ ಮುಂಜಾಗ್ರತಾ ನಾಮಫಲಕ ಹಿಡಿದು ಸಂಚರಿಸಿ ಧ್ವನಿವರ್ಧಕಗಳ ಮೂಲಕ ಜನರಿಗೆ ಅರಿವು ಮೂಡಿಸಿದರು.
Kshetra Samachara
17/10/2020 03:54 pm