ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೊನಾ ಜಾಗೃತಿ ಮೂಡಿಸಿದ ಬೆಂಡಿಗೇರಿ ಪೊಲೀಸ್ ಠಾಣೆ ಸಿಬ್ಬಂದಿ

ಹುಬ್ಬಳ್ಳಿ- ಪೊಲೀಸ್ ಕಮಿಷನರೇಟ್ ಹುಬ್ಬಳ್ಳಿ ಧಾರವಾಡ ಸಂಯೋಗದಲ್ಲಿ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸಲಾಯಿತು.‌

ನಗರದ ಮಂಟೂರ ರಸ್ತೆಯಲ್ಲಿ ಸಾರ್ವಜನಿಕರಿಗೆ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಿ, ನಿಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಿ, ಆಗಾಗ ಕೈಗಳನ್ನು ಸ್ಯಾನಿಟೈಸರನಿಂದ ತೊಳೆಯಿರಿ, ಕೆಮ್ಮು ನೆಗಡಿ ಜ್ವರ ಇರುವಂತಹ ವ್ಯಕ್ತಿಗಳಿಂದ ದೂರ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಎಂಬ ನಾಮ ಫಲಕದೊಂದಿಗೆ ರ್ಯಾಲಿ ಮುಖಾಂತರ ಕೊರೊನಾ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಠಾಣೆ ಇನ್ಸ್ಪೆಕ್ಟರ್ ಅರುಣಕುಮಾರ ಸೊಳಂಕಿ, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

16/10/2020 01:38 pm

Cinque Terre

13.11 K

Cinque Terre

0

ಸಂಬಂಧಿತ ಸುದ್ದಿ