ಧಾರವಾಡ: ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಇಷ್ಟು ದಿನ ಜಿಲ್ಲಾ ಕೊರೊನಾ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿರಲಿಲ್ಲ.
ಇಂದು ಧಾರವಾಡ ಜಿಲ್ಲಾಡಳಿತ ಜಿಲ್ಲಾಮಟ್ಟದ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದೆ.
ಜಿಲ್ಲೆಯಾದ್ಯಂತ ಒಟ್ಟು 137696 ಜನರನ್ನು ಕೊರೊನಾ ತಪಾಸಣೆಗೊಳಪಡಿಸಲಾಗಿದ್ದು, ಅದರಲ್ಲಿ 135215 ಜನರ ವರದಿ ನೆಗೆಟಿವ್ ಎಂದು ಬಂದಿದೆ.
ಜಿಲ್ಲೆಯಾದ್ಯಂತ ಇಲ್ಲಿಯವರೆಗೆ 19019 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 16792 ಜನ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.
ಕೊರೊನಾ ಸೋಂಕಿನಿಂದ ಇಲ್ಲಿಯವರೆಗೆ 523 ಜನ ಅಸುನೀಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 1704 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 254 ಜನರ ವರದಿ ಬರುವುದು ಬಾಕಿ ಉಳಿದ್ದಿದ್ದು, ಜಿಲ್ಲೆಯಾದ್ಯಂತ 139161 ಜನರ ಮೇಲೆ ನಿಗಾ ಇರಿಸಲಾಗಿದೆ. 17056 ಜನರನ್ನು 14 ದಿನಗಳ ಹೋಮ್ ಐಸೋಲೇಷನ್ ಅವಧಿಗೆ ಒಳಪಡಿಸಲಾಗಿದೆ.
15511 ಜನ ಈಗಾಗಲೇ 14 ದಿನಗಳ ಹೋಮ್ ಐಸೋಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 104890 ಜನ ಕೂಡ ಈಗಾಗಲೇ 28 ದಿನಗಳ ಹೋಮ್ ಐಸೋಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ.
Kshetra Samachara
13/10/2020 08:57 pm