ಹುಬ್ಬಳ್ಳಿ : ಮಾರ್ಚ್ 10 ರಿಂದ 12 ರ ವರೆಗೆ ಶ್ರೀಮಜ್ಜಯತೀರ್ಥರನ್ನು ಮೊದಲ್ಗೊಂಡು ಅನೇಕ ಮಹಾಮಹಿಮರ ಮೂಲ ವೃಂದಾವನಗಳಿಂದ ಪವಿತ್ರವಾದ ಮಳಖೇಡ ಕ್ಷೇತ್ರದಲ್ಲಿ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವ, ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ.
ಮೂರು ದಿನಗಳ ಕಾಲ ಈ ಪವಿತ್ರ ಕ್ಷೇತ್ರ ಅಕ್ಷರಶ: ಕನ್ನಡ ನಾಡಿನಾದ್ಯಂತ ಹಾಗೂ ನೆರೆ ರಾಜ್ಯಗಳ ಸಹಸ್ರಾರು ಭಕ್ತರ ಶ್ರದ್ಧಾ ಭಕ್ತಿಗಳ ಕೇಂದ್ರವಾಗಲಿದೆ.
ಉತ್ತರಾದಿ ಮಠಾಧೀಶರಾದ, ವಿದ್ಯಾಚಕ್ರವರ್ತಿಗಳಾದ ವೈರಾಗ್ಯಮೂರ್ತಿ ಶ್ರೀ ಸತ್ಯಾತ್ಮತೀರ್ಥರು ಪರಮ ಪೂಜನೀಯರಾದ ಅನೇಕ ಮಾಧ್ವ ಪೀಠಾಧಿಪತಿಗಳ ದಿವ್ಯ ಉಪ ಸ್ಥಿತಿಯಲ್ಲಿ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವವನ್ನು ನೆರವೇರಿಸಲಿದ್ದಾರೆ. ಜಯತೀರ್ಥ ವಿದ್ಯಾಪೀಠದಲ್ಲಿ ಸತತ 12 ವರುಷ ಅಭ್ಯಸಿಸಿದ 20 ವಿದ್ಯಾರ್ಥಿಗಳ ಸುಧಾನುವಾದ ಹಾಗೂ ಪರೀಕ್ಷೆ ಬೆಂಗಳೂರಿನಲ್ಲಿ(ಫೆ.28 ರಿಂದ ಮಾರ್ಚ್ 7) ಮಂಗಳ ಮಹೋತ್ಸವ ಮಳಖೇಡದಲ್ಲಿ ಜರುಗಲಿದೆ.
ಈ ಎಲ್ಲ ಸಜ್ಜನ ಸಾಧಕರಿಗೆ ಶುಭ ಕೋರುತ್ತ ಮಹಾ ಮಂಗಳೋತ್ಸವದ ಮಹತ್ಕಾರ್ಯದಲ್ಲಿ ಭಾಗಿಯಾಗಲು ಮಳಖೇಡಕ್ಕೆ ಧಾವಿಸುವ ಬನ್ನಿ.
ನಾರಾಯಣ ವೆಂ.ಭಾದ್ರಿ.
ನವನಗರ,ಹುಬ್ಬಳ್ಳಿ
(ಮೊ)92432 48972.
Kshetra Samachara
28/02/2022 12:03 pm