ಹುಟ್ಟುಹಬ್ಬ ಬಂತೆಂದರೆ ಸಾಕು ಮೋಜು ಮಸ್ತಿ ಮಾಡುವವರೆ ಹೆಚ್ಚು. ಅಂತದರಲ್ಲಿ ಇಲ್ಲೋರ್ವ ಸಮಾಜ ಸೇವಕ ತಮ್ಮ ಜನ್ಮ ದಿನದಂದು ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.
ಹೌದು. ಜೈ ಹನುಮಾನ ಟ್ರೇಡರ್ಸ್ ಬೆಂಗೇರಿ ಹುಬ್ಬಳ್ಳಿ- 23 ಮಾಲೀಕರು, ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕಾತರು ಹಾಗೂ ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಅವರು ಜೂನ್ 4ರ ಶನಿವಾರದಂದು ವಿಶೇಷವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಜೂನ್ 4ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹುಬ್ಬಳ್ಳಿಯ ಬೆಂಗೇರಿಯಲ್ಲಿರು ಖಾದಿ ಗ್ರಾಮೋದ್ಯೋಗ ಸಮುದಾಯ ಭವನದಲ್ಲಿ 'ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ'ಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಆಗಮಿಸಿ ಈ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿದೆ.
ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಶುಭಕೋರುವವರು:-
ಕಲಂದರ್ ಮುಲ್ಲಾ ಹಟೇಲಸಾಬ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ, ಮಹಾನಗರ ಪಾಲಿಕೆ ಸದಸ್ಯ ಮಹದೇವಪ್ಪ ನರಗುಂದ, ಕಾಸಿಮ್ ಕುಡಲಗಿ, ರಾಜು ಕಾಳೆ, ಅಶೋಕ ವಾಲ್ಮೀಕಿ, ಪ್ರವೀಣ ಹುರುಳಿ, ಕಲ್ಲಪ್ಪ ಬರಮಗೌಡ್ರ, ಶಖಿಲ್ ವಲಿ ಅಹ್ಮದ್..
Kshetra Samachara
03/06/2022 10:58 am