ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುವಂತೆ ನಾಡಿನ ಸಮಸ್ತ ಜನರ ಬದುಕಿನಲ್ಲಿ ಸಂತೋಷ ಪುನರಾವರ್ತನೆ ಆಗಲಿ. ಹಿಡಿದ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ. ಎಲ್ಲರೂ ಬೇವು ಬೆಲ್ಲದಂತೆ ಜೀವನದ ಆಗುಹೋಗುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕಿನ ಬಂಡೆಯಲ್ಲಿ ಅಚ್ಚಳಿಯದ ನೆನಪಿನೊಂದಿಗೆ ಮುನ್ನೆಡೆಯಿರಿ.
ನಿಮ್ಮೆಲ್ಲರ ಬಾಳಿನಲ್ಲಿ ಕಹಿಯ ನೆನಪು ಕಳೆದು ಸಿಹಿಯ ನೆನಪು ಮರಕಳಿಸುವಂತೆ ಮಾಡಲಿ. ಸೃಷ್ಟಿಯ ಸೊಬಗು ಚಿಗುರುವ ದಿನ, ಸೂರ್ಯಕಿರಣದ ಮೊದಲ ದಿನ, ಹಸಿರೆಲೆಗಳು ಸೂರ್ಯಕಾಂತಿ ಚೆಲ್ಲುವ ದಿನ, ಹಿಂದೂ ವರ್ಷ ಆರಂಭದ ಈ ಸುದಿನ ನಿಮ್ಮೆಲ್ಲರ ಬದುಕನ್ನು ಹಸನಾಗಿಸಲಿ.
ಕೊರೊನಾ ಕರಿನೆರಳು ಸರಿದು ಎಲ್ಲರ ಜೀವನದಲ್ಲಿ ಹೊಸ ಚೈತನ್ಯದ ಚಿಲುಮೆ ಮೊಳಗಿದೆ. ಈ ಸಂತೋಷದ ಸುದಿನ ದಿನವೂ ಬಾಳಲ್ಲಿ ಹೊರ ಹೊಮ್ಮಲಿ.
ಮತ್ತೊಮ್ಮೆ ಸಮಸ್ತ ಕರುನಾಡಿನ ಜನರಿಗೆ ಯುಗಾದಿ ಹಬ್ಬದ ಶುಭಾಶಯಗಳು.
ಶುಭಾಶಯ ಕೋರುವವರು:
ನಿರಂಜನಯ್ಯ ಹಿರೇಮಠ,ಸದಸ್ಯರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂಬರ-68
Kshetra Samachara
02/04/2022 09:12 am