ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವ ಕಾಂಗ್ರೆಸ್ ಉಪಾದಕ್ಷರಾಗಿ ಶ್ರೀ ಅಬ್ದುಲ್ ರೆಹಮಾನ್ ದೇಸಾಯಿ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನೂತನ ಉಪಾದಕ್ಷರಾಗಿ ಶ್ರೀ ಅಬ್ದುಲ್ ದೇಸಾಯಿ ಅವರನ್ನು, ಯುವ ಕಾಂಗ್ರೆಸ ಎಐಸಿಸಿ ಉಸ್ತುವಾರಿಯಾದ ಕೃಷ್ಣ ಅಲವೇರು ಹಾಗೂ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರ ಸೂಚನೆ ಮೇರೆಗೆ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರು ನೇಮಕ ಮಾಡಿದ್ದಾರೆ.

ಅಬ್ದುಲ್ ದೇಸಾಯಿ ಅವರ ಸಂಘಟನಾ ಚಾತುರ್ಯ ಮತ್ತು ಅವರ ಕೆಲಸವನ್ನೂ ನೋಡಿ ಅವರಿಗೆ ಈ ಹುದ್ದೆಯನ್ನು ನೀಡಲಾಗಿದೆ. ಹಾಗೂ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಯುವಕನಾದ ಇವರಿಗೆ ಶ್ರೀ ರಕ್ಷಾ ರಾಮಯ್ಯ ಅವರು ಕೈ ಹಿಡಿದಿದು, ಅಬ್ದುಲ್ ಅವರಿಗೆ ಈ ಹುದ್ದೆ ಲಭಿಸಿದೆ ಎಂದು ಮೂಲಗಳಿದ ತಿಳಿದು ಬಂದಿದೆ. ಹಾಗೂ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆದು ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ನೀಡಿದ ಈ ಹುದ್ದೆಗೆ ಉತ್ತರ ಕರ್ನಾಟಕ ಭಾಗದ ಎಲ್ಲ ಯುವಕರಲ್ಲಿ ಹಾಗೂ ಹುಬ್ಬಳ್ಳಿ ಧಾರವಾಡ ಯುವಕರಲ್ಲಿ ಮತ್ತೊಂದು ಹೊಸ ಹುರುಪು ನೀಡಿದಂತಾಗಿದೆ.

ಹಾಗೂ ನೂತನವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾಗಿ

ಆಯ್ಕೆಯಾದಂತಹ ಮಹಮ್ಮದ ಹರೀಪ್ ನಲಪಾಡ ಅವರಿಗೆ ಅಬ್ದುಲ್ ದೇಸಯಿ ಗೆಳೆಯರ ಬಳಗದಿಂದ ಅಭಿನಂದನೆಗಳು...

ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಯುವ ಕಾಂಗ್ರೆಸ್ ಸಮಿತಿಗೆ ನೂತನವಾಗಿ ನಾಮನಿರ್ದೇಸಿತರಾದ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಅಬ್ದುಲ್ ದೇಸಾಯಿ ಗೆಳೆಯರ ಬಳಗದ ವತಿಯಿಂದ ಹಾರ್ದಿಕ ಅಭಿನಂದನೆಗಳು...

ಇನ್ನು ಅಬ್ದುಲ್ ದೇಸಾಯಿಯವರನ್ನು ಆಯ್ಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವ ಪಡೆ ಅಭಿನಂದನೆ ಸಲ್ಲಿಸಿದ್ದಾರೆ...

Edited By : Shivu K
Kshetra Samachara

Kshetra Samachara

08/03/2022 09:24 am

Cinque Terre

29.89 K

Cinque Terre

3