ಸಮಸ್ತ ಕರುನಾಡಿನ ಜನತೆಗೆ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಈ ದೀಪಾವಳಿ ಹಬ್ಬದ ಸಂಭ್ರಮ ನಮ್ಮ ನಿಮ್ಮೆಲ್ಲರ ಬಾಂಧವ್ಯವನ್ನು ವೃದ್ಧಿಸಿ, ಪ್ರತಿಯೊಬ್ಬರ ಬಾಳಿನಲ್ಲಿ ಸಂತಸದ ಚಿಲುಮೆ ಚಿಮ್ಮುವಂತೆ ಮಾಡಲಿ. ಅಂಧಕಾರದ ಕತ್ತಲೆಯನ್ನು ಕಳೆದು ಸಾಕ್ಷಾತ್ಕಾರದ ಹೊಂಬೆಳಕನ್ನು ಹರಿಸಲಿ.
ದೀಪಾವಳಿ ಸಂಭ್ರಮದ ದಿನ ಬೆಳಗುವ ಪ್ರತಿಯೊಂದು ದೀಪಗಳು ಶಾಂತಿ, ಸೌಹಾರ್ಧತೆಯ ಸ್ನೇಹದ ಬಂಧುವಾಗಿ ಜನ ಮನಸ್ಸುಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ.
ತಾಯಿ ಲಕ್ಷ್ಮೀದೇವಿ ಎಲ್ಲರಿಗೂ ಸಕಲೈಶ್ವರ್ಯ ನೀಡಿ ಕರುಣಿಸಿಲಿ, ಮತ್ತೊಮ್ಮೆ ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
ಶುಭ ಕೋರುವವರು : ಸನ್ಮಾನ್ಯ ಶ್ರೀ ಅಮೃತ ಅಯ್ಯಪ್ಪ ದೇಸಾಯಿ, ಜನಪ್ರಿಯ ಶಾಸಕರು, ಧಾರವಾಡ ಗ್ರಾಮೀಣ ಕ್ಷೇತ್ರ-71
Kshetra Samachara
04/11/2021 12:14 pm