ದೀಪಗಳಿಂದ ದೀಪ ಬೆಳಗಿ ಬೆಳಕಿನ ಹಬ್ಬ ಆಚರಿಸುವಂತೆ ಎಲ್ಲರ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಸುಖ ಶಾಂತಿ ಸಮೃದ್ಧಿ ನೆಲೆಸಲಿ. ಎಲ್ಲರ ಬಾಳಿನಲ್ಲಿಯೂ ಕತ್ತಲೆ ಕಳೆದು ಹೊಸ ಚೈತನ್ಯದ ಬೆಳಕು ಹೊರಹೊಮ್ಮಲಿ. ಹಿಡಿದ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ.
ಕೊರೊನಾದ ಕರಿನೆರಳು ಸರಿದು ಎಲ್ಲರ ಬದುಕು ಆರೋಗ್ಯದಿಂದ ನಡೆಯಲಿ. ನಾಡಿನ ನಮ್ಮ ಎಲ್ಲ ಆತ್ಮೀಯ ಜನತೆಗೆ ದೇವರು ಉತ್ತಮ ಆರೋಗ್ಯವನ್ನು ಕರುಣಿಸಲಿ. ಎಲ್ಲರ ಬದುಕು ಹಸಿರಾಗಿರಲಿ. ಎಲ್ಲರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಶುಭಾಶಯ ಕೋರುವವರು: ನಿರಂಜನಯ್ಯ ಹಿರೇಮಠ, 68ನೇ ವಾರ್ಡಿನ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು, ಹುಬ್ಬಳ್ಳಿ
Kshetra Samachara
04/11/2021 10:38 am