ಸಮಸ್ತ ಕರುನಾಡಿನ ಜನತೆಗೆ ದೀಪಗಳ ಹಬ್ಬ ದೀಪಾವಳಿ ಶುಭಾಶಯಗಳು. ಎಲ್ಲರ ಮನೆ ಹಾಗೂ ಮನೆಗಳು ದೀಪದಂತೆ ಪ್ರಕಾಶಮಾನವಾಗಿ ಪ್ರಜ್ವಲಿಸಲಿ. ಎಲ್ಲರ ಜೀವನದ ಕಷ್ಟದ ಕತ್ತಲೆ ಕಳೆದು ಬದುಕಿನಲ್ಲಿ ಹೊಸ ಬೆಳಕು ಮೂಡಲಿ. ಅನುಭವಿಸಿದ ಕಷ್ಟಗಳು ಕಣ್ಮರೆಯಾಗಿ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಲಿ.
ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಐಶ್ವರ್ಯದ ಜೊತೆಗೆ ಆರೋಗ್ಯ, ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಹಿಡಿದ ಕಾರ್ಯಗಳೆಲ್ಲ ಯಾವುದೇ ವಿಘ್ನಗಳಿಲ್ಲದೆ ನೆರವೇರಲಿ. ಬದುಕು ಮತ್ತು ಸಂತೋಷದ ಸಾಗರದಂತೆ ಹರಿಯಲಿ.
ಮತ್ತೊಮ್ಮೆ ನಾಡಿನ ಸಮಸ್ತ ಜನತೆಗೆ ಹಾಗೂ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಹೃದಯಿ ಬಾಂಧವರಿಗೆ ದೀಪಾವಳಿ ಶುಭಾಶಯಗಳು.
ಶುಭಾಶಯ ಕೋರುವವರು: ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ
Kshetra Samachara
04/11/2021 10:05 am