ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಜನತಾ ಪಕ್ಷದ ಪರಿವಾರಕ್ಕೆ ರಾಜಣ್ಣ ಕೊರವಿ ಸೇರ್ಪಡೆ: ಕಮಲ ಪಡೆಯ ಅಭಿನಂದನೆ

ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ ಸದಸ್ಯರಾಗಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿರುವ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಜಣ್ಣ ಕೊರವಿಯವರು ಸುಮಾರು ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ಸೇವೆ ಸಲ್ಲಿಸಿ ಈಗ ಭಾರತೀಯ ಜನತಾ ಪಕ್ಷದ ಪರಿವಾರವನ್ನು ಸೇರಲು ಇಚ್ಚಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಪರಿವಾರ ಸೇರಲು ತೀರ್ಮಾನಿಸಿದ್ದು,ಇದೇ 23ರಂದು ಶನಿವಾರ ಸಂಜೆ 5ಗಂಟೆಗೆ ಹುಬ್ಬಳ್ಳಿಯ ಚೇತನ ಬಿಸಿನೆಸ್ ಸ್ಕೂಲ್ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜಣ್ಣ ಕೊರವಿಯವರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ. ರಾಜಣ್ಣ ಕೊರವಿಯವರ ರಾಜಕೀಯ ಜೀವನ ಮತ್ತಷ್ಟು ಅಭಿವೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸೋಣ....

ಶುಭಾಶಯ ಹಾಗೂ ಸ್ವಾಗತ ಕೋರುವವರು

ರಾಜಣ್ಣ ಕೊರವಿ

ಅಭಿಮಾನಿ ಬಳಗ ಹು-ಧಾ ಮಹಾನಗರ

Edited By :
Kshetra Samachara

Kshetra Samachara

23/01/2021 09:19 am

Cinque Terre

63.95 K

Cinque Terre

13