ಕುಂದಗೋಳ: ನಾಳೆ (ಅ.9ರಂದು) ಮಹರ್ಷಿ ವಾಲ್ಮೀಕಿ ಜಯಂತಿ ಇರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇದೇ ವಾಲ್ಮೀಕಿ ಜಯಂತಿಗೆ ನಮ್ಮ ಕುಂದಗೋಳ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಮುದ್ರಿಸಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಮಂತ್ರಣದಲ್ಲಿ ತಪ್ಪಿರುವ ವಿಚಾರ ಗೊತ್ತಿಲ್ಲ ನೋಡಿ.
ಅಯ್ಯೋ! ಅದೇನು ತಪ್ಪು ಅಂದ್ರಾ? ನಾಲ್ಕು ಇಲಾಖೆ ಸೇರಿ ಮುದ್ರಿಸಿರುವ ಆಮಂತ್ರಣ ಪತ್ರಿಕೆಯಲ್ಲೇ ತಪ್ಪಾಗಿದೆ.
ಹಾ! ಆ ತಪ್ಪು ಏನಂದ್ರೆ ಇಲ್ನೋಡಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಮುದ್ರಿಸಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ ಎಂದು ನಮೂದಿಸಿ ಸ್ವಾಗತ ಕೋರಿದ್ದಾರೆ.
ಪ್ರಭಾರಿಯಾಗಿ ತಾಲೂಕು ಪಂಚಾಯಿತಿ ಕರ್ತವ್ಯದಲ್ಲಿದ್ದ ಡಾ.ಮಹೇಶ ಕುರಿ ಅವರು ಆ ಹುದ್ದೆಯಿಂದ ವರ್ಗಾವಣೆಗೊಂಡಿದ್ದಾರೆ. ಆ ಹುದ್ದೆಗೆ ಅ.1ರಿಂದ ಪರಮೇಶಕುಮಾರ್.ವಿ ಕರ್ತವ್ಯದಲ್ಲಿದ್ದಾರೆ. ಇಷ್ಟು ಸಾಮಾನ್ಯ ವಿಷಯ ಅಧಿಕಾರಿಗಳಿಗೆ ತಿಳಿದಿಲ್ಲವೇ ಅಥವಾ ತಮ್ಮ ತಪ್ಪನ್ನು ಜನರು ಗುರುತು ಮಾಡುವುದಿಲ್ಲ ಎಂಬ ಅಸಡ್ಡೆಯೋ ಗೊತ್ತಿಲ್ಲ ಒಟ್ಟಿನಲ್ಲಿ ತಪ್ಪು ತಪ್ಪೇ ಅಲ್ವೇ?
Kshetra Samachara
08/10/2022 10:24 pm