ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸವಾಯಿ ಗಂಧರ್ವರಿಗೆ ಭಾರತೀಯ ಅಂಚೆ ವಿಶೇಷ ಗೌರವ

ಹುಬ್ಬಳ್ಳಿ: ಅವರು ನಿಜಕ್ಕೂ ಧಾರವಾಡ ಜಿಲ್ಲೆಯ ಹೆಸರಾಂತ ಸಾಹಿತಿಗಳು. ಹಿಂದೂಸ್ತಾನಿ ಸಂಗೀತದ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿರುವ ಹೆಮ್ಮೆಯ ಪ್ರತೀಕ.

ತಮ್ಮಲ್ಲಿರುವ ಅಗಾಧವಾದ ಸಂಗೀತ ಶಕ್ತಿಯಿಂದ ದೇಶಿಯ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿರುವ ವ್ಯಕ್ತಿ. ಇಂತಹ ವ್ಯಕ್ತಿಗೆ ಭಾರತೀಯ ಅಂಚೆ ವಿಶೇಷ ಗೌರವದ ಮೂಲಕ ಸ್ಮರಿಸುವ ಕಾರ್ಯಕ್ಕೆ ಮುಂದಾಗಿದೆ.

ಅಷ್ಟಕ್ಕೂ ಯಾರು ಆ ಸಾಹಿತಿ...? ಅವರ ಕೊಡುಗೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಜನಿಸಿರುವ ಪಂಡಿತ ಸವಾಯಿ ಗಂಧರ್ವರು ಹಿಂದೂಸ್ತಾನಿ ಸಂಗೀತ, ಖಯಾಲ್, ಠುಮ್ರಿ, ಭಜನೆ, ನಾಟಕದ ಮೂಲಕ ಸಾಕಷ್ಟು ಸೇವೆಯನ್ನು ಸಲ್ಲಿಸಿರುವ ಸವಾಯಿ ಗಂಧರ್ವರಿಗೆ ಈಗ ಭಾರತೀಯ ಅಂಚೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ.

ಹೌದು.. ಪಂಡಿತ ಸವಾಯಿ ಗಂಧರ್ವರ ಸ್ಮರಣಾರ್ಥವಾಗಿ ಸವಾಯಿ ಗಂಧರ್ವರ ಹೆಸರಿನ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಈಗ ವಿಶೇಷ ಗೌರವ ಮಹಾನ್ ಸಾಧಕರಿಗೆ ದೊರೆತಿರುವುದು ಧಾರವಾಡ ಜಿಲ್ಲೆಯ ಸೌಭಾಗ್ಯವಾಗಿದೆ. ಇದೇ ಅಕ್ಟೋಬರ್ 11ರಂದು ಬಿಡುಗಡೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ.

ಇನ್ನೂ ಹುಬ್ಬಳ್ಳಿ ಮೈಲಿದೂರದಲ್ಲಿರುವ, ಕುಂದಗೋಳ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಅಲ್ಲಿನ ಆಡಳಿತ ಭಾಷೆ ಮರಾಠಿ. ಇಂತಹ ಪರಿಸರದಲ್ಲಿ ಹಿಂದೂಸ್ತಾನೀ ಸಂಗೀತದಲ್ಲಿ ದೇಶದ ಮನೆಮಾತಾಗಿ ಪ್ರಸಿದ್ಧರಾಗಿದ್ದ, ಸವಾಯಿ ಗಂಧರ್ವರು, ಜನಿಸಿದರು. ಅವರ ಬಾಲ್ಯದ ಹೆಸರು, ರಾಮಚಂದ್ರ ಗಣೇಶ ಕುಂದಗೋಳಕರ್. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ. ಬಾಲ್ಯದ ದಿನಗಳಲ್ಲಿ ರಾಮಚಂದ್ರ ಗಣೇಶರು, ಸ್ವಾಗತ ಗೀತೆ, ಪಲ್ಲಕ್ಕಿ ಸೇವೆಯ ಸಮಯದಲ್ಲಿ ಭಜನೆ ಹಾಡು, ಮುಂತಾದವುಗಳನ್ನು ಹಾಡುತ್ತಿದ್ದರು.

ಅಲ್ಲದೇ ಬೆಳೆದಂತೆ ಹಿಂದೂಸ್ತಾನಿ ಸಂಗೀತದಲ್ಲಿ ಅಪ್ರತಿಮ ಕೊಡುಗೆ ನೀಡಿದ್ದು, ಈಗ ಸರ್ಕಾರ ಇಂತಹ ಮಹಾನ ಸಾಧಕರನ್ನು ಗುರುತಿಸಿ ಗೌರವ ನೀಡಲು ಮುಂದಾಗಿದೆ.

ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಮಹಾನ ಸಾಧಕರಿಗೆ ಭಾರತ ಸರ್ಕಾರ ಇಂತಹದೊಂದು ಗೌರವ ನೀಡಲು ಮುಂದಾಗಿರುವುದು ನಿಜಕ್ಕೂ ವಿಶೇಷವಾಗಿದೆ. ಸಾಹಿತ್ಯ ಕ್ಷೇತ್ರದ ತವರೂರಾದ ಧಾರವಾಡ ಜಿಲ್ಲೆಯ ಮತ್ತಷ್ಟು ಹಿರಿಯ ಕಲಾವಿದರಿಗೆ ಇಂತಹ ಗೌರವ ದೊರೆಯಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/10/2022 04:16 pm

Cinque Terre

202.22 K

Cinque Terre

2

ಸಂಬಂಧಿತ ಸುದ್ದಿ