ಧಾರವಾಡ: ಧಾರವಾಡ ಜಿಲ್ಲಾ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿ ಉಪನಿರ್ದೇಶಕ ಹುದ್ದೆಯ ಮುಂಬಡ್ತಿಯೊಂದಿಗೆ ವರ್ಗಾವಣೆಗೊಂಡ ಮಂಜುನಾಥ ಡೊಳ್ಳಿನ ಅವರಿಗೆ ಧಾರವಾಡದ ವಾರ್ತಾ ಇಲಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಡೊಳ್ಳಿನ, ಧಾರವಾಡದಿಂದ ನನ್ನ ವೃತ್ತಿ ಜೀವನ ಆರಂಭವಾಗಿದ್ದು, ಮುಂಬಡ್ತಿಯೊಂದಿಗೆ ವರ್ಗಾವಣೆಯಾಗಿರುವುದು ಸಂತಸ ತಂದಿದೆ. ಧಾರವಾಡ ಜಿಲ್ಲೆಯ ಕರ್ತವ್ಯದಲ್ಲಿ ಸಾಕಷ್ಟು ಅನುಭವಗಳನ್ನು ಪಡೆದಿದ್ದು, ನನ್ನ ಮುಂದಿನ ಸೇವೆಗೆ ದಾರಿದೀಪವಾಗಿವೆ. ನನ್ನ ಸೇವಾವಧಿಯಲ್ಲಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮ ಸ್ನೇಹಿತರು ಸಹಕಾರ, ಪ್ರೀತಿ, ವಿಶ್ವಾಸ ತೋರಿದ್ದು ಕೃತಜ್ಞನಾಗಿದ್ದೇನೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಅವರು ಧಾರವಾಡ ಜಿಲ್ಲೆಯ ನೂತನ ವಾರ್ತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ವರ್ಗಾವಣೆ ಪೂರ್ವದಲ್ಲಿ ಅವರು ಬಾಗಲಕೋಟ ಜಿಲ್ಲಾ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
Kshetra Samachara
19/09/2022 08:24 pm