ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಿಕೆ ಬಜೆಟ್ ನತ್ತ ಎಲ್ಲರ ಚಿತ್ತ: ಪರಿಷ್ಕೃತ ಬಜೆಟ್ ಗೆ ಸಿದ್ಧತೆ

ಹುಬ್ಬಳ್ಳಿ: ಸುಮಾರು ಮೂರು ವರ್ಷಗಳ ಬಳಿಕ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸುತ್ತ ಅವಳಿನಗರದ ಜನರ ಕಣ್ಣು ನೆಟ್ಟಿದೆ. ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮೊದಲ ಸಾಮಾನ್ಯ ಸಭೆಯಲ್ಲಿ ಘೋಷಿಸಿದ ಯೋಜನೆಗಳ ಅನುಷ್ಠಾನಗೊಳಿಸಲು ಪರಿಷ್ಕೃತ ಬಜೆಟ್ ಸಿದ್ಧಗೊಳಿಸಲು ಸಜ್ಜಾಗುತ್ತಿದೆ.

ಹೌದು.. ಬಜೆಟ್ ಮಂಡನೆಯು ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರ ಜವಾಬ್ದಾರಿಯಾಗಿದ್ದು, ಚರ್ಚಿಸಲು ಈ ವಾರದಲ್ಲಿ ಸದಸ್ಯರ ಸಭೆ ಸೇರುವ ನೀರಿಕ್ಷೆ ಇದೆ. ಅದೇ ರೀತಿ ಅಧಿಕಾರಿಗಳು ಕಳೆದ ಮಾರ್ಚ್ ತಿಂಗಳಲ್ಲಿ 2022-23ನೇ ಸಾಲಿನ ಆರ್ಥಿಕ ವರ್ಷದ 919 ಕೋಟಿ ರೂ. (ಹಿಂದಿನ ಬಾಕಿ ಸೇರಿ) ಮೊತ್ತದ ಬಜೆಟ್ ತಯಾರಿಸಿ ಸರಕಾರದ ಅನುಮೋದನೆ ಪಡೆದುಕೊಂಡಿದ್ದಾರೆ.

919 ಕೋಟಿ ರೂ. ಗಾತ್ರದ 2022-23ನೇ ಸಾಲಿನ ಬಜೆಟ್ನಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ರಸ್ತೆ ಅಗಲಿಕರಣ, ಭೂಸ್ವಾಧೀನಕ್ಕಾಗಿ 15 ಕೋಟಿ ರೂ., ಕಾರ್ಮಿಕದ ಗೃಹ ಭಾಗ್ಯ ಯೋಜನೆಗೆ 18 ಕೋಟಿ, ಮಹಿಳಾ ಬಜಾರ್, ಸಿಸಿ ಕ್ಯಾಮರಾಗಳ ಅಳವಡಿಕೆಗೆ 6 ಕೋಟಿ, ನಗರ ಅರಣ್ಯೀಕರಣಕ್ಕೆ 5.78 ಕೋಟಿ, ಬಡತನ ನಿರ್ಮೂಲನೆ, ಎಸ್ಸಿ ಎಸ್ಟಿ ಸಮುದಾಯ ಅಭಿವೃದ್ಧಿ ಮತ್ತು ಮೂಲ ಸೌಕರ್ಯಕ್ಕೆ 24.70 ಕೋಟಿ, ಪಾರ್ಕಿಂಗ್ ಸುಧಾರಣೆಗೆ 7 ಕೋಟಿ ರೂ., ವೇಂಡಿಂಗ್ ಝೋನ್ ನಿರ್ಮಾಣಕ್ಕೆ 7 ಕೋಟಿ ರೂ ಹೀಗೆ ವಿವಿಧ ವಿಭಾಗಗಳಿಗೆ ಹಣ ಹೊಂದಾಣಿಕೆ ಮಾಡಿದ್ದಾರೆ.

ಒಟ್ಟಿನಲ್ಲಿ ಸಾಕಷ್ಟು ನಿರೀಕ್ಷೆ ಹೊತ್ತಿರುವ ಪಾಲಿಕೆ ಬಜೆಟ್ ಮೇಲೆ ಅವಳಿನಗರದ ಜನರು ಸಾಕಷ್ಟು ಭರವಸೆ ಇಟ್ಟಿದ್ದು, ಯಾವ ಭರವಸೆ ಸಿಹಿ ಹಾಗೂ ಕಹಿಯಾಗಲಿದೆ ಎಂಬುವುದನ್ನು ಕಾದುನೋಡಬೇಕಿದೆ.

Edited By : Shivu K
Kshetra Samachara

Kshetra Samachara

09/09/2022 10:13 am

Cinque Terre

27.8 K

Cinque Terre

0

ಸಂಬಂಧಿತ ಸುದ್ದಿ