ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹರ್ ಘರ್ ತಿರಂಗಾ ಜಾಗೃತಿ ಜಾಥಾ ಅಭಿಯಾನ

ನವಲಗುಂದ : 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದೆ ದಿನಾಂಕ 13 ರಿಂದ 15ರ ವರೆಗೆ ಪ್ರತಿ ಮನೆ-ಮನೆಗೂ ರಾಷ್ಟ್ರೀಯ ಧ್ವಜ ಅಭಿಯಾನ ನಿಮಿತ್ತ ಶಾಲಾ ಮಕ್ಕಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಹರ್ ಘರ್ ತಿರಂಗಾ ಜಾಗೃತಿ ಅಭಿಯಾನದ ಮೂಲಕ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಮಾಜಿ ಅಧ್ಯಕ್ಷ ಮಂಜು ಜಾಧವ, ಎಲ್ಲಾ ವಾರ್ಡಿನ ಪುರಸಭೆ ಸದಸ್ಯರು ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/08/2022 03:58 pm

Cinque Terre

10.07 K

Cinque Terre

0

ಸಂಬಂಧಿತ ಸುದ್ದಿ