ಧಾರವಾಡ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡ ತಾಲೂಕಿನ ರಾಮಾಪುರ ಮತ್ತು ವೀರಾಪುರ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಧಾರವಾಡ ತಾಲೂಕಾ ಆಡಳಿತದಿಂದ ತಹಶೀಲ್ದಾರ ಸಂತೋಷ ಹಿರೇಮಠ ಅವರು ಸನ್ಮಾನಿಸಿ, ಗೌರವಿಸಿದರು.
ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ರಾಮಾಪುರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಯಲ್ಲಪ್ಪ ಭೀಮಪ್ಪ ಬಡಿಗೇರ ಅವರ ಮನೆಗೆ ತೆರಳಿ, ಯಲ್ಲಪ್ಪ ಅವರಿಗೆ ಫಲಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ನಂತರ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರ ಸೋಮಪ್ಪ ಬಸಪ್ಪ ಹಂಚಿನಮನಿ ಅವರ ಮನೆಗೆ ತೆರಳಿ, ಫಲಪುಷ್ಪ ನೀಡಿ, ಗೌರವಿಸಿದರು.
ನಂತರ ಅವರು ಸ್ವಾತಂತ್ರ್ಯ ಹೋರಾಟಗಾರರಾದ ತಡಕೊಡ ಗ್ರಾಮದ ಮಲ್ಲಯ್ಯ ಈರಯ್ಯ ಮಠಪತಿ, ಗರಗ ಗ್ರಾಮದ ತೋರಪ್ಪ ರಾಜಪ್ಪ ತೋರೊಜಿ ಅವರ ಮನೆಗಳಿಗೆ ತೆರಳಿ, ಫಲಪುಷ್ಪ ನೀಡಿ ಗೌರವಿಸಿದರು.
ಸನ್ಮಾನಿಸಿದ ನಂತರ ತಹಸಿಲ್ದಾರ ಅವರು ಸ್ವಾತಂತ್ರ್ಯ ಹೋರಾಟಗಾರರ ಮತದಾರ ಚೀಟಿಗೆ ಅವರ ಆಧಾರ್ ಸಂಖ್ಯೆ ಜೋಡಣೆ ಮಾಡಿದರು.
Kshetra Samachara
10/08/2022 10:31 am