ನವಲಗುಂದ: ಶೌಚಾಲಯ ನಮಗ ಬ್ಯಾಡ್ರಿ, ಇಲ್ಲಿ ಇರೋ ಮನಿ ಮಂದಿಗೆ ವಾಸನಿ ಬರ್ತೇತ್ರಿ, ಈಗಾಗಲೇ ಇಲ್ಲಿ ಸಾರ್ವಜನಿಕ ಶೌಚಾಲಯ ಇದ್ರೂ ಯಾಕ ಕಟ್ಟಬೇಕ್ರಿ, ಅಂತಾ ನಮ್ಮ ನವಲಗುಂದ ನಗರದಾಗ ಇರೋ ಮಂದಿ ತಲಿ ಕೆಟ್ಟ ರೋಡಿಗೆ ಇಳದ ಬಿಟ್ಟಾರ್ ನೋಡ್ರಿ, ಅದ ಎಲ್ಲಿ ಮತ್ತ್ ಯಾಕ್ ಅಂತಿರೇನ್, ಅದನ್ನ ನಾವು ಡಿಟೈಲ್ ಆಗಿ ಹೇಳ್ತಿವಿ ಕೇಳ್ರಿ.
ಇದ ನಮ್ಮ ನವಿಲುಗುಂದ ಅಂದ್ರ ನವಲಗುಂದ ನಗರದಾಗ ಇರೋ ದೇಸಾಯಿ ಪೇಟೆ ಓಣಿ ಬಳಿಯ ಬಿ.ಎಸ್.ಎನ್.ಎಲ್ ಕಚೇರಿ ಕಡೆ ನೋಡ್ರಿ, ಈಗಾಗಲೇ ಇಲ್ಲೇ ಸಾರ್ವಜನಿಕ ಶೌಚಾಲಯ ಐತ್ರಿ ಆದ್ರೂ ಪುರಸಭೆ ಅಧಿಕಾರಿಗಳು ಇಲ್ಲೇ ಹೈಟೇಕ್ ಶೌಚಾಲಯ ಕಟ್ಟಾಕ್ ರಾತ್ರೋ ರಾತ್ರಿ ಶುರು ಮಾಡ್ಯಾರ್ ಅಂತ್ರಿ, ಇಲ್ಲೇ ಮೊದಲ ಅಂಗಡಿ ಇದ್ವು, ಅವನ್ನ ಪುರಸಭೆ ಅಧಿಕಾರಿಗಳು ಡೆಮೋಲಿಶ್ ಮಾಡಿ, ಸೂಪರ್ ಮಾರ್ಕೆಟ್ ಕಟ್ಟಿ ಅದ್ರಗ ವ್ಯಾಪಾರಾ ಮಾಡಾಕ್ ಅನುಕೂಲ ಮಾಡಿ ಕೊಡ್ತೀವಿ ಅಂದಿದ್ರಂತ ಆದರ ಮಾಡಿದ್ದ ಕೆಲಸ ನೀವ ಕೇಳ್ರಿ.
ಇನ್ನ ಇದ ಜಾಗದಾಗ ಉರ್ದು ಶಾಲಿ ಮತ್ತ್ ಮನಿಗಳಿಗೆ ವಾಸನೆ ಬಾಳ್ ಬರ್ತೇತಿ ಇನ್ನೊದು ಇಲ್ಲಿ ವಾಸಾ ಮಾಡೋ ಜನರ ವಾದ ಆಗೇತ್ರಿ, ಏನೆಲ್ಲಾ ಸಮಸ್ಯೆ ಅದಾವ ಅನ್ನೋದನ್ನ ನೀವ ಕೇಳ್ರಿ.
ಇಷ್ಟೆಲ್ಲಾ ಸಮಸ್ಯೆ ಅದಾವ ಅಂತ ಜನ ಹೇಳಾಕತ್ತಾರ ಅಂದ್ರ ಪುರಸಭೆ ಅಧಿಕಾರಿಗಳು ಮತ್ತ ಈ ವಾರ್ಡ್ ನ ಸದಸ್ಯರು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಬೇಕು. ಈ ಬಗ್ಗೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳು ಮನವಿ ನೀಡಿದ್ದಾರಂತ, ಆದ್ರೂ ಇಲ್ಲೇ ರಾತ್ರೋ ರಾತ್ರಿ ಕೆಲಸ ಮಾಡಾಕತ್ತಾರ ಅನ್ನೋದು ಸ್ಥಳೀಯರ ಆರೋಪ ಆಗೇತಿ...
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ನವಲಗುಂದ
Kshetra Samachara
04/08/2022 10:10 pm