ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಮಿ ಯೋಜನೆ ಹುಬ್ಬಳ್ಳಿ ಶಹರ ತಾಲೂಕು ರಾಜ್ಯಕ್ಕೆ ಪ್ರಥಮ : ಶಶಿಧರ್ ಮಾಡ್ಯಳ ಕಾರ್ಯಕ್ಕೆ ಪ್ರಶಂಸೆ

ಹುಬ್ಬಳ್ಳಿ : ಭೂಮಿ ಯೋಜನೆಯಡಿ ಜೂನ್ -2022 ದ ಮಾಹೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ , 5.66 ಸಿಗ್ಮಾ ಮೌಲ್ಯವನ್ನು ಪಡೆದು, 4,783 ವಿಲೇವಾರಿ ಸೂಚ್ಯಾಂಕ ( Disposal index ) ಪಡೆದಿರುವ ಹುಬ್ಬಳ್ಳಿ ಶಹರ ತಾಲ್ಲೂಕು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದಿರುದನ್ನು ಶ್ಲಾಘಿಸಿ ಭೂಮಾಪನ ಇಲಾಖೆ ಆಯುಕ್ತ ಹಾಗೂ ಭೂಮಿ ಯೋಜನೆ ನಿರ್ದೇಶಕ ಮುನೀಶ್ ಮೌದ್ಗಿಲ್ ಅವರು ತಹಶೀಲ್ದಾರ ಶಶಿಧರ ಮಾಡ್ಯಾಳ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ.

ಹುಬ್ಬಳ್ಳಿ ಶಹರ ತಾಲ್ಲೂಕಿನ ಈ ಕಾರ್ಯ ಸಾಧನೆಗೆ ತಾಲ್ಲೂಕು ಕಛೇರಿಯ ಅಧಿಕಾರಿ, ಸಿಬ್ಬಂದಿಗಳ ಸಹಕಾರ , ಕಾರ್ಯತತ್ಪರತೆ ಕಾರಣವಾಗಿರುತ್ತದೆ . ಭೂಮಿ ಉಸ್ತುವಾರಿ ಕೋಶದ ಪರವಾಗಿ ತಂಡಕ್ಕೆ ಅಭಿನಂದಿಸುತ್ತೇನೆ . ಮುಂದಿನ ದಿನಗಳಲ್ಲಿಯೂ ಸಹಾ ಇದೇ ರೀತಿಯ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/07/2022 10:52 pm

Cinque Terre

11.12 K

Cinque Terre

2

ಸಂಬಂಧಿತ ಸುದ್ದಿ