ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಾ.ಗಂಗೂಬಾಯಿ ಹಾನಗಲ್ ಹುಟ್ಟಿದ ಮನೆಗೆ ಡಿಸಿ ಗುರುದತ್ತ ಹೆಗಡೆ ಭೇಟಿ

ಧಾರವಾಡ: ಗಾನ ಕೋಗಿಲೆ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ಮನೆ ಧಾರವಾಡ ಹೊಸಾಯಲ್ಲಾಪುರದ ಗಂಗೋತ್ರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಭೇಟಿ ನೀಡಿ ಪರಿಶೀಲಿಸಿದರು.

ಸಾರ್ವಜನಿಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಅವರು, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೊಂದಿಗೆ ಡಾ.ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ಮನೆ ಗಂಗೋತ್ರಿ ಪುನರ್ ನಿರ್ಮಾಣ ಮತ್ತು ಮೂಲಸೌಕರ್ಯಗಳ ಪೂರೈಕೆ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಧಾರವಾಡದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಎತ್ತರಿಸಿದ ಮಹತ್ವದ ವ್ಯಕ್ತಿಗಳ ಕುರಿತು ಲಭ್ಯವಿರುವ ಎಲ್ಲ ವಸ್ತು, ದಾಖಲೆ ಹಾಗೂ ಸ್ಥಳಗಳನ್ನು ಸಂರಕ್ಷಿಸಿ, ಐತಿಹಾಸಿಕತೆಯನ್ನು ಕಾಪಾಡಲು ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಿದೆ. ವಿವಿಧ ಇಲಾಖೆಗಳಲ್ಲಿ ಈ ಕುರಿತು ಕಾರ್ಯಕೈಗೊಳ್ಳಲು ಲಭ್ಯವಿರುವ ಅನುದಾನವನ್ಬು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಂಜೀವ ಲಕಮನಹಳ್ಳಿ, ಉದಯ ಯಂಡಿಗೇರಿ, ಶಂಕರ ಕುಂಬಿ, ಮಹಾಂತೇಶ ಲಿಂಬಣ್ಣದೇವರಮಠ, ಅಣ್ಣಪ್ಪ ಪಾಲನಕರ ಸೇರಿದಂತೆ ಇತರರು ಸ್ಥಳದಲ್ಲಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

Edited By : Nagaraj Tulugeri
Kshetra Samachara

Kshetra Samachara

01/07/2022 11:54 am

Cinque Terre

12.41 K

Cinque Terre

0

ಸಂಬಂಧಿತ ಸುದ್ದಿ