ಹುಬ್ಬಳ್ಳಿ: ಸುಮಾರು ನಲವತ್ತು ತಿಂಗಳ ಬಳಿಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುತ್ತಿರುವ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕೂಡ ನಿಯೋಜಿಸಲಾಗಿದೆ.
ಹೌದು.. ಅವಧಿ ಪೂರ್ಣಗೊಂಡು ಸುಮಾರು ಮೂರು ವರ್ಷಗಳ ಬಳಿಕ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಸಾಮಾನ್ಯ ಸಭೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, 82 ವಾರ್ಡ್‌ಗಳ ಕಾರ್ಪೋರೇಟರ್ ಪಾಲಿಕೆ ಆವರಣಕ್ಕೆ ಆಗಮಿಸುತ್ತಿದ್ದಾರೆ.
ಇಂದು ಸಭೆಯಲ್ಲಿ ಸಾಕಷ್ಟು ಮಹತ್ವದ ವಿಷಯಗಳು ಚರ್ಚೆಯಾಗಲಿದ್ದು, ಅವಳಿನಗರದ ಜನರ ದೃಷ್ಟಿ ಸಾಮಾನ್ಯ ಸಭೆಯತ್ತ ನೆಟ್ಟಿದೆ.
Kshetra Samachara
30/06/2022 12:36 pm