ಧಾರವಾಡ: ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸಾರ್ವಜನಿಕರ ಅಹವಾಲುಗಳ ಈಡೇರಿಕೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವರದಾನವಾಗಿದೆ. ಜೂನ್ 18 ರಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಏಳು ತಾಲೂಕಿನಿಂದ ಒಟ್ಟು 235 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಅಣ್ಣಿಗೇರಿ ತಾಲ್ಲೂಕಿನ ಮಣಕವಾಡ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 31 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 22 ಅರ್ಜಿಗಳು ಒಟ್ಟು 53 ಅರ್ಜಿಗಳನ್ನು ಸ್ವೀಕರಿಸಿ 18 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿ, 35 ಅರ್ಜಿಗಳು ಬಾಕಿ ಉಳಿದಿದ್ದು ಹಂತಹಂತವಾಗಿ ವಿಲೇವಾರಿ ಮಾಡಲಾಗುವುದು.
ಧಾರವಾಡ ತಾಲ್ಲೂಕಿನ ತೇಗೂರು ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 14 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 27 ಅರ್ಜಿಗಳು ಒಟ್ಟು 41 ಅರ್ಜಿಗಳನ್ನು ಸ್ವೀಕರಿಸಿ 5 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿ, 36 ಅರ್ಜಿಗಳು ಬಾಕಿ ಉಳಿದಿದ್ದು ಹಂತಹಂತವಾಗಿ ವಿಲೇವಾರಿ ಮಾಡಲಾಗುವುದು.
ಅಳ್ನಾವರ ತಾಲ್ಲೂಕಿನ ಡೋರಿ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 4 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 5 ಅರ್ಜಿಗಳು ಒಟ್ಟು 9 ಅರ್ಜಿಗಳನ್ನು ಸ್ವೀಕರಿಸಿ, ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಹುಬ್ಬಳ್ಳಿ ತಾಲ್ಲೂಕಿನ ಪಾಳೆ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 26 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 19 ಅರ್ಜಿಗಳು ಒಟ್ಟು 45 ಅರ್ಜಿಗಳಲ್ಲಿ 23 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿ, 22 ಅರ್ಜಿಗಳು ಬಾಕಿ ಉಳಿದಿವೆ.
ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 5 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 36 ಅರ್ಜಿಗಳು ಒಟ್ಟು 41 ಅರ್ಜಿಗಳನ್ನು ಸ್ವೀಕರಿಸಿದ್ದು ನಿಯಮಾನುಸಾರ ವಿಲೇವಾರಿ ಮಾಡಲಾಗುವುದು.
ನವಲಗುಂದ ತಾಲ್ಲೂಕಿನ ಅಹೆಟ್ಟಿ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 2 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 5 ಅರ್ಜಿಗಳು ಒಟ್ಟು 7 ಅರ್ಜಿಗಳ ಸ್ವೀಕರಿಸಿದ್ದು, ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು.
ಕಲಘಟಗಿ ತಾಲ್ಲೂಕಿನ ಹನಮಾಪೂರ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 9 ಅರ್ಜಿಗಳು, ಇತರೆ ಇಲಾಖೆಗೆ ಸಂಬಂಧಿಸಿದ 30 ಅರ್ಜಿಗಳು ಒಟ್ಟು 39 ಅರ್ಜಿಗಳಲ್ಲಿ 6 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿ, 33 ಅರ್ಜಿಗಳು ಬಾಕಿ ಉಳಿದಿದ್ದು ಹಂತಹಂತವಾಗಿ ವಿಲೇವಾರಿ ಮಾಡಲಾಗುವುದು.
ಜೂನ್ 18 ರಂದು ಜಿಲ್ಲೆಯ ವಿವಿಧ ಗ್ರಾಮಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಂದ ಒಟ್ಟು 235 ಅರ್ಜಿಗಳನ್ನು ಸ್ವೀಕರಿಸಿ, ಅದರಲ್ಲಿ 61 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 174 ಅರ್ಜಿಗಳು ಬಾಕಿ ಉಳಿದಿದ್ದು, ಇಲಾಖೆಗಳ ನಿಯಮಾನುಸಾರ ಪರಿಶೀಲಿಸಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Kshetra Samachara
20/06/2022 08:55 pm