ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಲವು ದಾಖಲೆಗೆ ಸಾಕ್ಷಿಯಾದ ನೈಋತ್ಯ ರೈಲ್ವೆ; ವರ್ಷದುದ್ದಕ್ಕೂ ಸಾಧನೆ ಹಾದಿ!

ಹುಬ್ಬಳ್ಳಿ: ಅದು ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆದ ಇಲಾಖೆ. ದಾಖಲೆ ಮೇಲೆ ದಾಖಲೆ ಮಾಡುವ ಮೂಲಕ ಈ ವರ್ಷವನ್ನು ದಾಖಲೆ ವರ್ಷವನ್ನಾಗಿ ಮಾಡಿಕೊಂಡಿದೆ. ಕೋವಿಡ್ ಸಂದರ್ಭ ವೂ ಗುರಿ ಬಿಡದೆ ಸಾಧನೆ ಮಾಡಿದೆ. ಹಾಗಿದ್ದರೇ ಯಾವುದು ಆ ಇಲಾಖೆ ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...

ನೈಋತ್ಯ ರೈಲ್ವೆ ವಲಯ ಒಂದೇ ವರ್ಷದ ಅವಧಿಯಲ್ಲಿಯೇ ಹತ್ತು ಹಲವಾರು ದಾಖಲೆಗಳನ್ನು ತನ್ನ ಮುಡಿಗೇರಿಸಿದೆ. ಕೋವಿಡ್ ಸವಾಲು ಎದುರಿಸಿ ನೈಋತ್ಯ ರೈಲ್ವೆ 511.7 ರೂಟ್ ಕಿ.ಮೀ. ವಿದ್ಯುದ್ದೀಕರಣ ಮಾಡಿದೆ. ಸರಕು ಸಾಗಾಣಿಕೆಯಲ್ಲಿ ಕಳೆದ ವರ್ಷಕ್ಕಿಂತ 27.34% ಹೆಚ್ಚು ಆದಾಯ ಗಳಿಸಿದ್ದು, 4160.04 ಕೋಟಿ ಆದಾಯ ಮೂಲಕ ದಾಖಲೆ ನಿರ್ಮಿಸಿದೆ. ಗುಜರಿ ವಸ್ತು ಮಾರಾಟದಲ್ಲಿ ಇತಿಹಾಸ ನಿರ್ಮಿಸಿದ್ದು, 138.04 ಕೋಟಿ ಆದಾಯ ಗಳಿಸಿದೆ. ನೈಋತ್ಯ ರೈಲ್ವೆ 6214.85 ಕೋಟಿ ಆರಂಭಿಕ ಆದಾಯ ಹೊಂದಿ ಗಮನಾರ್ಹ ಸಾಧನೆ ಮಾಡಿದೆ.

ಇನ್ನು, 2021-22ರಲ್ಲಿ ಸಮಯ ಪಾಲನೆ, ಕಾರ್ಯಕ್ಷಮತೆಯಲ್ಲಿ ಭಾರತೀಯ ರೈಲ್ವೆಯಲ್ಲಿ ನೈಋತ್ಯ ರೈಲ್ವೆ ವಲಯ 4ನೇ ಸ್ಥಾನ ತನ್ನದಾಗಿಸಿದೆ. 22 ಕಿ.ಮೀ. ಹೊಸಮಾರ್ಗ ಹಾಗೂ 187.64 ಕಿ.ಮೀ. ಜೋಡಿ ಮಾರ್ಗ ನಿರ್ಮಾಣ ಮಾಡಿದೆ. ಸಾರಿಗೆ, ಸರಕು ಸಾಗಣೆಯಲ್ಲಿ ಕಾರ್ಗೋ ದಂತಹ ಹಲವು ಸೇವೆಗೆ ನೈಋತ್ಯ ರೈಲ್ವೆ ಉತ್ತೇಜನ ನೀಡಿದೆ.

Edited By : Shivu K
Kshetra Samachara

Kshetra Samachara

08/04/2022 10:49 am

Cinque Terre

26.12 K

Cinque Terre

4

ಸಂಬಂಧಿತ ಸುದ್ದಿ