ಹುಬ್ಬಳ್ಳಿ: ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ರೈಲು ಹಾಗೂ ಸಾರಿಗೆ ಸೇವೆ ಜನಪ್ರಿಯತೆ ಪಡೆದಿರುವಂತೆ ವಿಮಾನ ಸೇವೆ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಸೇವೆ ಹಾಗೂ ಸಂಪರ್ಕದ ಮೂಲಕ ಹುಬ್ಬಳ್ಳಿಯ ವಿಮಾನ ನಿಲ್ದಾಣ ವಿಂಗ್ಸ್ ಇಂಡಿಯಾ-2022 ವತಿಯಿಂದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬುವಂತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಹೌದು, ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಅವರ ಪ್ರಾದೇಶಿಕ ಸಂಪರ್ಕದ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕೋವಿಡ್ ನಂತರದಲ್ಲಿ ಚೇತರಿಕೆ ಕಂಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಇತ್ತಿಚೆಗೆ ಕಾರ್ಗೋ ಸೇವೆಯ ಮೂಲಕ ಸರಕು ಸಾಗಾಣಿಕೆಯಲ್ಲಿಯೂ ಸಾಧನೆ ಮಾಡುತ್ತಿದ್ದು, ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿರುವ ವಿಮಾನ ನಿಲ್ದಾಣವಾಗಿದೆ.
ಒಟ್ಟಿನಲ್ಲಿ ಸ್ವಚ್ಚತೆ, ವ್ಯವಸ್ಥಿತ ಪರಿಸರ ಹೀಗೆ ಹಲವಾರು ವಿಷಯ ವಸ್ತುಗಳ ಮಾನದಂಡವನ್ನು ಆಧರಿಸಿ ಅತ್ಯುತ್ತಮ ವಿಮಾನ ನಿಲ್ದಾಣ ಎಂಬುವಂತ ಪ್ರಶಸ್ತಿಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ಹುಬ್ಬಳ್ಳಿಯ ಹೆಮ್ಮೆ ವಿಷಯವಾಗಿದೆ.
Kshetra Samachara
27/03/2022 10:34 am