ನವಲಗುಂದ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನ ರಾಮ್ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ನವಲಗುಂದ ಪಟ್ಟಣದ ತಾಲೂಕಾ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕುಗಳಲ್ಲಿ 05-04-2022 ರಂದು ಡಾ.ಬಾಬು ಜಗಜೀವನ ರಾಮ್ ರವರ 115ನೇ ವರ್ಷದ ಜಯಂತಿ ಹಾಗೂ 14-04-2020 ರಂದು ಡಾ.ಬಿ.ಆರ್ ಅಂಬೇಡ್ಕರ್ ರವರ 131 ನೇ ಜಯಂತಿ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ಆಚರಿಸಲು ಅನುಸರಿಸಬೇಕಾದ ವಿಧಿ ವಿಧಾನಗಳ ಬಗ್ಗೆ ಚರ್ಚಿಸಲು ನವಲಗುಂದದ ತಹಶೀಲ್ದಾರ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಇನ್ನು ಈ ಸಂಧರ್ಭದಲ್ಲಿ ಕುಮಾರ್ ಮಾದರ, ಎಚ್.ಆರ್ ಕೆಳಗೇರಿ, ಶಿವಪುತ್ರಪ್ಪ ಕೆಳಗೆರೆ, ನಾಗಲಿಂಗಪ್ಪ ದೊಡ್ಡಮನಿ, ಶಿವು ಪೂಜಾರ, ನಿಂಗಪ್ಪ ಕೆಳಗೇರಿ, ಶಿವು ಎಸ್ ಛಲವಾದಿ, ಮುಧೋಳ, ನಂದಿನಿ ಹಾದಿಮನಿ, ಲಕ್ಷ್ಮಣ್ ಚಲವಾದಿ, ಕಾಶಿನಾಥ್ ಚಲವಾದಿ, ರವಿ ಬೆಂಡಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
25/03/2022 11:33 am