ನವಲಗುಂದ : ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಸೋಮವಾರ ನವಲಗುಂದ ತಾಲೂಕಿನ ಅರಹಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಎಲ್ಲಾ ಅಧಿಕಾರಿಗಳು, ಸಂಬಂಧಿಸಿದ ಯೋಜನೆಗಳ ಬಗ್ಗೆ ವಿವರ ನೀಡಿದರು. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಕೆಲವೊಂದು ಇತ್ಯರ್ಥ ಮಾಡಿದರು. ಮಧ್ಯಾನದ ನಂತರ ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಿದರು.
ಈ ವೇಳೆ ಸಾರ್ವಜನಿಕರ ಮುಖ್ಯ ಬೇಡಿಕೆಗಳಾದ ಅರಹಟ್ಟಿ ಗ್ರಾಮದಿಂದ ಭೋಗಾನೂರ ರಸ್ತೆಗಳ ದುರಸ್ತಿ, ದಲಿತ ಸಂಘಟನೆಯಿಂದ ಸಮುದಾಯದ ಭವನ ಬೇಡಿಕೆ, ರುದ್ರಭೂಮಿ, ಕಾಲುವೆ ನೀರು ರೈತರ ಜಮೀನಿಗೆ ತಲಪುವಂತೆ ಕಾಲುವೆ ದುರಸ್ತಿ, ನವ ಗ್ರಾಮಕ್ಕೆ ಬಸ್ ನಿಲ್ದಾಣ ಮತ್ತು ಆಟದ ಮೈದಾನದ ಬೇಡಿಕೆ, ಗ್ರಾಮ ದೇವತೆಯ ಜಮೀನು ಮರಳಿಸುವ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ತಹಶೀಲ್ದಾರರ ಎದುರು ಇಡಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ನವೀನ ಹುಲ್ಲೂರ, ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕಾ ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಪಿಡಿಓ, ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಜರಿದ್ದರು.
Kshetra Samachara
21/03/2022 07:42 pm