ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಸಿಎಂ ಚಿನ್ನದ ಪದಕಕ್ಕೆ ಆಯ್ಕೆ ಆದ ಗೃಹ ರಕ್ಷಕ ದಳದ ಸಿಬ್ಬಂದಿ

ಅಳ್ನಾವರ: ದಶಕಗಳಿಂದ ಗೃಹ ರಕ್ಷಕದಳದಲ್ಲಿ ಸುದೀರ್ಘವಾಗಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿಗಳು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಆನಂದ ಶಿರಹಟ್ಟಿ,ಗೃಹ ರಕ್ಷಕದಳ ಧಾರವಾಡ ಘಟಕ ಇವರು 12 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.ಹಾಗೂ ವಿಜಯಕುಮಾರ ಕರ್ಜಗಿ ವಾಹನ ಚಾಲಕರಾಗಿ 19 ವರ್ಷದಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಪರಿಸ್ಥಿಯಲ್ಲಿ ಹಗಲಿರುಳೆನ್ನದೆ ಕರ್ತವ್ಯ ದಲ್ಲಿ ಭಾಗಿ,ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಉತ್ತಮವಾಗಿ ಪರಿಸ್ಥಿಯನ್ನು ನಿಭಾಯಿಸಿರುವುದನ್ನ ಪರಿಗಣಿಸಿ ಈ ಇಬ್ಬರನ್ನು ಸಿ ಎಂ ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಅಳ್ನಾವರ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಪ್ರಭಾರ ಘಟಕಾಧಿಕಾರಿ ಎಂ.ಕೆ ಜಾಧವ್ ಅವರ ನೇತೃತ್ವದ ಗೃಹ ರಕ್ಷಕ ದಳದ ತಂಡ, ಇವರಿಗೆ ಸನ್ಮಾನ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಭೋದಕರಾದ ಬಸವರಾಜ ಅಗಳಕಾರ,ಸಹಾಯಕ ಭೋದಕರಾದ ಟಿ,ಪಿ,ಬಾದಾಮಿ ಹಾಗೂ ಗ್ರಹ ರಕ್ಷಕರು ಹಾಗೂ ಗ್ರಹ ರಕ್ಷಕಿಯರು ಹಾಗೂ ಉಪಸ್ಥಿತರಿದ್ದರು.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

07/03/2022 11:13 am

Cinque Terre

27.33 K

Cinque Terre

0

ಸಂಬಂಧಿತ ಸುದ್ದಿ