ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಏನೆಲ್ಲ ಆಯ್ತು ?

ಕಲಘಟಗಿ: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕ್ರಷ್ಣಕಾಂತ್ ನೇತ್ರತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಯಿತು. ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡಲು ತಿಳಿಸಲಾಯಿತು.

ತಾಲೂಕಿನ ಹಳ್ಳಿಗಳಾದ ಬೊಗೆನಾಗರಕೊಪ್ಪ,ಬಗಡಗೇರಿ,ಸೋಲಾರಗೊಪ್ಪ, ದೇವಿಕೋಪ್ಪ, ಅರೆಬಸನಕೋಪ್ಪ, ಗಲಗಿನಕಟ್ಟಿ ಹುಲಕೊಪ್ಪ ಗ್ರಾಮದ ಜನತೆ ಹೊಲ ಗದ್ದೆಗಳ ರಸ್ತೆ ಸ್ಮಶಾನದ ಸಮಸ್ಯೆಗಳನ್ನು ಚರ್ಚಿಸಿದರು. ತಾಲೂಕಿನಾದ್ಯಂತ ಅಕ್ರಮ ಸರಾಯಿ ಮಾರಾಟವಾಗುತ್ತಿದ್ದು ಮಟಕಾ,ಇಸ್ಪೀಟ್ ಆಟಗಳ ಹಾವಳಿ ಹೆಚ್ಚಾಗಿದೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲು ಹಾಗೂ ಇನ್ನಿತರ ಸಮಸ್ಯೆಗಳಾದ ಫುಟ್ ಪಾತ್, ಟ್ರಾಪಿಕ್, ಸಮಸ್ಯೆಗಳಿಗೆ ತ್ವರಿತ ಪರಿಹಾರ ಕೈಗೊಳ್ಳಲು ಸ್ಥಳೀಯ ಸಿ.ಪಿ.ಐ.ಪ್ರಭು ಸೂರಿನ್ ಅವರಿಗೆ

ತಿಳಿಸಿದರು.

ತಾಲೂಕಿನ ಮಿಶ್ರೀಕೊಟಿ ಗ್ರಾಮದಲ್ಲಿ ಓ.ಪಿ.ಯಿಂದ ಪಿ.ಎಚ್ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಯಿತು. 112 ಜನ ಸ್ನೇಹಿಗೆ ಕರೆಮಾಡಿ ತಮ್ಮ ಸಮಸ್ಯೆಗೆ ತ್ವರಿತವಾಗಿ ಪರಿಹಾರ ನೀಡಲಾಗುವುದು.ನೇರವಾಗಿ ಎಸ್.ಪಿ. ಕಚೇರಿಗೆ ಕೂಡಾ ಸಂಪರ್ಕಿಸ ಬಹುದು ಎಂದರು.

ಈ ಸಂದರ್ಭದಲ್ಲಿ ಡಿ.ವಾಯ್ ಎಸ್.ಪಿ.ಎಂ.ಬಿ.ಸಂಕದ ಹಾಗೂ ಸಾರ್ವಜನಿಕರಾದ ಮಂಗಲಪ್ಪ, ಲಮಾಣಿ, ಮಹಾಂತೇಶ, ತಹಶಿಲ್ದಾರ, ರೈತ ಮುಖಂಡ ಶಂಕ್ರಪ್ಪ ಕೆಲಗೇರಿ, ಉಳವಪ್ಪ, ಮಹಾಂತೇಶ, ಹೆಂಬ್ಲಿ ಕೃಷ್ಣಾ, ತಹಶಿಲ್ದಾರ್ ಮಲ್ಲೇಶ್ ಹಂಚಿನಮನಿ ಹಾಗೂ ಕಲಘಟಗಿ ಪೊಲೀಸ್ ಸಿಬ್ಬಂದಿಗಳು ಇದ್ದರು.

Edited By : Shivu K
Kshetra Samachara

Kshetra Samachara

04/03/2022 12:31 pm

Cinque Terre

13.14 K

Cinque Terre

0

ಸಂಬಂಧಿತ ಸುದ್ದಿ