ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗೋಡೆ ಬರಹ, ಚಿತ್ರಗಳ.. ಪ.ಪಂ ಸ್ವಚ್ಛ ಸರ್ವೇಕ್ಷಣ ಜಾಗೃತಿ..

ಕುಂದಗೋಳ : ಇಷ್ಟು ದಿನ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ, ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮ ಆಯೋಜಿಸಿ ಜನರಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಸ್ವಚ್ಛತೆ ಬಗ್ಗೆ ತಿಳಿ ಹೇಳುತ್ತಿದ್ದ ಪಟ್ಟಣ ಪಂಚಾಯಿತಿ ಈಗ ಗೋಡೆ ಬರಹ ಜಾಗೃತಿ ಆರಂಭಿಸಿದೆ.

ಕುಂದಗೋಳ ಪಟ್ಟಣ ಪಂಚಾಯಿತಿ ಅಧಿಕಾರಿ ಹಾಗೂ ಸದಸ್ಯರು ಪಟ್ಟಣ ಪಂಚಾಯಿತಿ ಕಾಂಪೌಂಡ್, ಬಸ್ ನಿಲ್ದಾಣದ ಗೋಡೆ, ಸಾರ್ವಜನಿಕ ಶೌಚಾಲಯದ ಗೋಡೆ ಮೇಲೆ "ಕಾಡು ಬೆಳೆಸಿ ನಾಡು ಉಳಿಸಿ, ಹಸಿರೇ ಉಸಿರು, ಕಸ ಎಲ್ಲೇಂದರಲ್ಲಿ ಎಸೆಯಬೇಡಿ, ಉತ್ತಮ ಆರೋಗ್ಯಕ್ಕಾಗಿ ಶೌಚಾಲಯ ಬಳಸಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ರಕ್ಷಿಸಿ ಎಂಬ ವಾಕ್ಯ ಹಾಗೂ ಚಿತ್ರಗಳನ್ನು ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.

ಈಗಾಗಲೇ ಕುಂದಗೋಳದ ಎಲ್ಲೇಡೆ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಶೌಚಾಲಯ ಬಳಸುವ ಬಗ್ಗೆ ಪಟ್ಟಣ ಪಂಚಾಯಿತಿ ಸಾಕಷ್ಟು ಜಾಗೃತಿ ಮೂಡಿಸಿದೆ. ಇದನ್ನೇಲ್ಲ ಅರಿತು ಜನ ಕೂಡಾ ಬದಲಾಗಬೇಕಿದೆ.

Edited By : Shivu K
Kshetra Samachara

Kshetra Samachara

03/03/2022 04:27 pm

Cinque Terre

28.28 K

Cinque Terre

0

ಸಂಬಂಧಿತ ಸುದ್ದಿ