ಹುಬ್ಬಳ್ಳಿ: ಸರಕಾರಿ ಆಫೀಸನ್ಯಾಗ್ ಕಾಂಚನಂ ಕಾರ್ಯಸಿದ್ಧಿ ಅನ್ನುವ ಮಂತ್ರ ಎಲ್ಲರಿಗೂ ಗೊತ್ತ್ ಇರೋದ.... ಆದ್ರೆ ಇದು ಸಿ.ಸಿ ಇಲ್ಲದಿರುವ ಮಿನಿ ವಿಧಾನ ಸೌಧ ಬಿಲ್ಡಿಂಗ್‌ನ್ಯಾಗ ಐತಲ್ಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ. ಅಲ್ಲೆ ಒಳಗ ರೊಕ್ಕಾ ಕೊಡತೈವಿ ಕೆಲಸಾ ಮಾಡ್ರೀ ಅಂದ್ರೂ ಕೆಲಸ ಮಾಡಾಕ್ ಒಬ್ಬರೂ ಇಲ್ಲ.
ಹಂಗಂತ್ ಏನ್ ಇದ್ ಆಫೀಸ್ ಟೈಮ್ ಮುಗದೈತಿ ಅನಕೊಬ್ಯಾಡ್ರೀ. ಈ ಸಮಯ ಸರಿಯಾಗಿ 3:30 ನಾಲ್ಕ್ ಆದ್ರೂ. ಯಾರು ಇಲ್ಲ. ಎಲ್ಲ ಕಚೇರಿಯ ಬಾಗಿಲುಗಳನ್ನು ವಿಶ್ವೇಶ್ವರಯ್ಯ ಮ್ಯೂಸಿಯಂನಂಗ್ ತಗದ್ ಪ್ರದರ್ಶನ ಇಟ್ಟ್ ಎಲ್ಲಿಗೆ ಹೊಗಿದ್ದಾರೆ. ಅನ್ನೋದ್ "ನಿಗೂಢ ಪ್ರಶ್ನೆ".
ಈ ಸಾಮೂಹಿಕ ಚಕ್ಕರಿನ್ ನಿಗೂಢತೆಯ ಬೆನಟ್ಟಿ PublicNext ಹೊಂಟಾಗ್ ಗೊತ್ತಾಗಿದ್ ಈ ಇಲ್ಲಿನ ಯಾವುದೋ ಒಬ್ಬ ಸಿಬ್ಬಂದಿ ಮನ್ಯಾಗ್ functionಗೆ ಇಲ್ಲಿ ಒಂದ್ ನೋಣನೂ ಬಿಡಲಾದಂಗ್ ಎಲ್ಲಾರೂ ಹೊಗ್ಯಾರ್.
ಅಲ್ಲರೀ. UPOR ಆಫೀಸ್ ನ್ಯಾಗ್ ಕೆಲಸ ಮಾಡೋರ್ ನಿಮಗ ನಿಮ್ಮ ಕೆಲಸದ ಮ್ಯಾಗ್ ಲಕ್ಷೆ ಇಲ್ಲ ಅಂದ್ರು ಓಕೆ. ಪರವಾಗಿಲ್ಲ.. ಆದ್ರೆ ನಿಮ್ಮ ನಂಬಿ ಇಲ್ಲಿ ಹಲವಾರು ಮಂದಿಯ ದಾಖಲೆ ಇರತಾವ್. ಯಾರದ್ರೂ ಬಂದು ಏನರ ತಗೊಂಡ್ ಹೋದ್ರ ಇರುವ document ಗೆ ಏನರ ಆದ್ರ ಯಾರ್ ಜವಾಬ್ದಾರಿ ರೀ...?
For example ಇಲ್ಲೇ...ನೋಡ್ರೀ....ನೋಡ್ರೀ.... ಅಲಮಾರಿಗೆ ಚಾವಿ ಇಲ್ಲ... ಹಂಗ್ ಇಲ್ಲ ಗಂಟ ಗಂಟ ಗಟ್ಟಲೆ ದಾಖಲೆ ಬಂಡಲ್ ಕಟ್ಟಿ ಇಟ್ಟಾರ್ ಅದರಾಗ್ ಬ್ಯಾರೇ ಇಲ್ಲಿ ಬೋರ್ಡ್ ಇಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ ಅಂತ ನಮ್ಮ ತಂಡದವರ್ ಅಲ್ಲೆ ಅಡ್ಯಾಡಿದ್ರೂ ಕೇಳಾಕ್ ಒಂದ್ ನರಪಿಳ್ಳೆನೂ ಇಲ್ಲ....
ಇದೆಲ್ಲಾ ಬರೆ ನಾವ್ ಹೇಳಿದ್ ಅಲ್ಲ.. ಪಾಪ್ ಅಲ್ಲಿ ಕಾದ್ ಕಾದ್ ಸುಸ್ತ್ ಆದ್ ಅಜ್ಜಾರ್ ಮಾತಾಡತಾರ್ ಕೇಳ್ರೀ..
ಅಲ್ಲಾ ಇವರೇನ್ ಎಲ್ಲಾರೂ ರಜೆಮ್ಯಾಗ್ ಅದಾರೋ..? ಆಕಸ್ಮಾತ್ ರಜೆನ ಆಗಿದ್ರ ಎಲ್ಲರಿಗೂ ಒಮ್ಮೆ ಹೇಗ್ ರಜೆ ಕೊಟ್ರು.? ಎಲ್ಲರಿಗೂ ರಜೆ ಕೊಟ್ಟಿದ್ದ ಖರೆ ಆದ್ರ್. ಆಫೀಸ್ ಬಾಗಲಾ ಯಾಕ್ ತಗೆದ್ರ್.? ಅಷ್ಟೇಲ್ಲಾದ್ರ್ ನಡಕ್ ಕಾಡುವ ಕಟ್ಟಕಡೆಯ ಪ್ರಶ್ನೆ ಇದು ಸರಕಾರಿ ಕಚೇರಿನಾ ಅಥವಾ ಜನತಾ ಬಜಾರ ಮಾರ್ಕೆಟಾ ಅಂತ.
ಅಲ್ಲ ಇದ್ ಏನರೇ private ಆಫೀಸ್ ನ್ಯಾಗ್ ಆಗಿದ್ರ ಎಲ್ಲರನ್ನೂ ಮನಿಗೆ ಕಳಿಸಿ ಬಿಡತ್ತಿದ್ರ್. ಇಷ್ಟ ಎಲ್ಲಾ ಸಾಕ್ಷಿ ಸಮೇತ ತೋರಿಸೆವೂ ನಾವ್ ಸರಕಾರದವರ್ ಆಗಲಿ ಮ್ಯಾಲಿನ್ ಅಧಿಕಾರಿಗಳಾಗಲಿ ಏನರೇ action ತಗೊಂತ್ತಾರ್ ಏನ್ ನೋಡ್ ಬೇಕ್ ಅಷ್ಟ್....
ನಮಗ ಅನುಸುವಂಗ್ ಏನು action ಆಗುದಿಲ್ಲ ಕಾಣತೈತ್ತೀ. ಆದ್ರೂ ಎಲ್ಲೋ ಒಂದ್ ಆಸೆ..
ಇಷ್ಟಲಿಂಗ ಪಾವಟೆ ಸ್ಪೆಶಲ್ ಬ್ಯೂರೋ ಪಬ್ಲಿಕ್ ನೆಕ್ಸ್ಟ್
Kshetra Samachara
18/02/2022 08:57 pm