ಹುಬ್ಬಳ್ಳಿ: ಗುಜರಿ ವಸ್ತುಗಳ ಮಾರಾಟದಲ್ಲಿ ನೈರುತ್ಯ ರೈಲ್ವೆ ದಾಖಲೆ ನಿರ್ಮಿಸಿದೆ. ಏಪ್ರಿಲ್ ನಿಂದ ಡಿಸೆಂಬರ್ 2021 ವರೆಗೆ ಗುಜರಿ ಮಾರಾಟದಿಂದ ನೈಋತ್ಯ ರೈಲ್ವೆಗೆ 100 ಕೋಟಿ ರೂಪಾಯಿ ಲಾಭವಾಗಿದೆ. ರೂ 6.68 ಕೋಟಿ ಮೌಲ್ಯದ ಗುಜರಿ ಹರಾಜಿನ ಮಾರಾಟದಿಂದ (ಕೇವಲ ಒಂದೇ ದಿನದಲ್ಲಿ) ಹುಬ್ಬಳ್ಳಿ ವಿಭಾಗವು ಹೊಸ ದಾಖಲೆಯನ್ನು ನಿರ್ಮಿಸಿದೆ.
ಪ್ರಧಾನ ವ್ಯಸ್ಥಾಪಕ ಸಂಜೀವ್ ಕಿಶೋರ್ ರವರು ಮಾರ್ಚ್ 2022ರ ವೇಳೆಗೆ ನೈಋತ್ಯ ರೈಲ್ವೆ ರೂ 150 ಕೋಟಿಗೂ ಹೆಚ್ಚಿನ ಮೊತ್ತದ ಮಾರಾಟವನ್ನು ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ನೈಋತ್ಯ ರೈಲ್ವೆ ಯು ರೈಲ್ವೆ ಗುಜರಿ ವಸ್ತುಗಳ ಸಂಗ್ರಹಣೆ ಹಾಗೂ ವಿಲೇವಾರಿಗೆ ವ್ಯವಸ್ಥಿತ ನಿರ್ವಹಣಾ ಪದ್ಧತಿಯನ್ನು ಅನುಸರಿಸುತ್ತಾ ಬಂದಿದೆ. ಗುಜರಿ ವಸ್ತುಗಳ ವಿಲೇವಾರಿಯನ್ನು ಆನ್ಲೈನ್ ಹರಾಜಿನ (ಇ ಆ್ಯಕ್ಷನ್) ಮೂಲಕ ನಡೆಸಲಾಗುವುದು. ಇದರಲ್ಲಿ ದೇಶಾದ್ಯಂತ ಗುಜರಿ ವ್ಯಾಪಾರಿಗಳು ಪಾಲ್ಗೊಳ್ಳುವ ಕೋವಿಡ್-19ರ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಭಾರತೀಯ ರೈಲ್ವೆ ಗುಜರಿವಸ್ತುಗಳ ಸಂಗ್ರಹಣೆಗೆ ಒತ್ತು ನೀಡಿ ಅವುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ರೂ. 150 ಕೋಟಿಗಳ ಮಾರಾಟವನ್ನು ಸಾಧಿಸಿ ಇಂದಿನವರೆಗಿನ ದಾಖಲೆಯನ್ನು ಮೀರುವ ನಿರೀಕ್ಷೆಯಿದೆ.
Kshetra Samachara
29/12/2021 10:12 pm