ನವಲಗುಂದ : ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರ ಶಾಲೆಯ ಶಿಕ್ಷಕರು ಪಿಠೋಪಕರಣಗಳ ಖರೀದಿ ಹಾಗೂ ಅವುಗಳ ಬಳಕೆಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಕೆಲಸಕ್ಕೆ ಉಪಯೋಗ ಮಾಡುತ್ತಿದ್ದಾರೆ ಎಂದು ಪಟ್ಟಣದಲ್ಲಿ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಆರೋಪ ಮಾಡಿದ್ದಾರೆ.
ಈ ಕುರಿತು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಪತ್ರವನ್ನು ಬರೆದಿರುವ ಅವರು ಸರ್ಕಾರದ ಹಣದಲ್ಲಿ ಕಂಪ್ಯೂಟರ್, ಪ್ರಿಂಟರ್ ಖರೀದಿ ಮಾಡಿ ಬೇರೆ ಶಾಲೆಯ ಮಕ್ಕಳಿಗೆ ಸಂಬಂಧ ಪಟ್ಟ ಕೆಲಸವನ್ನು ಮಾಡುತ್ತಾ ಹಣವನ್ನು ಮಾಡುತ್ತಿದ್ದಾರೆ ಎನ್ನುವಂತಹ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಅಂತಹ ಶಿಕ್ಷಕರ ಮೇಲೆ ಇಲಾಖಾ ತನಿಖೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡಿದರು.
Kshetra Samachara
29/12/2021 09:49 pm