ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿದ್ದ ಮನೆಯನ್ನು ವೀಕ್ಷಣೆ ಮಾಡಿದ ಕೇಂದ್ರ ಅಧ್ಯಯನ ತಂಡ

ಹುಬ್ಬಳ್ಳಿ- ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ, ಕೊಯ್ಲಿಗೆ ಬಂದ 75,199 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ರೀತಿಯ ಕೃಷಿ ಬೆಳೆಗಳು ಹಾಗೂ 14,678 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಮತ್ತು ಜುಲೈ ತಿಂಗಳಿನಿಂದ ಇಲ್ಲಿಯವರೆಗೆ 1968 ಮನೆಗಳನ್ನು ಇಂದು ಕೇಂದ್ರ ಸರ್ಕಾರದ ಅಂತರ್ ಇಲಾಖಾ ಅಧಿಕಾರಿಗಳ ಅಧ್ಯಯನ ತಂಡಕ್ಕೆ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯ ಮಳೆಹಾನಿ ಕುರಿತು ವಿವರಣೆ ಪಡೆದರು.

ಜುಲೈ ತಿಂಗಳಿನಿಂದ ಡಿಸೆಂಬರ್ 15 ರ ವರೆಗಿನ ವರದಿ ಪ್ರಕಾರ 7 ಪೂರ್ಣ ಪ್ರಮಾಣದ ಮನೆ ಹಾನಿಯಾಗಿದ್ದು, ರೂ.6,65,700/- ಪರಿಹಾರ ನೀಡಲಾಗಿದೆ. ಮತ್ತು ಬಿ1, ಬಿ2 ಕೆಟಗೇರಿ ಸೇರಿ ಒಟ್ಟು 681 ಮನೆಗಳಿಗೆ ಹಾನಿಯಾಗಿದ್ದು, ರೂ.5,90,57,100/- ಪರಿಹಾರವನ್ನು ನೀಡಲಾಗಿದೆ. ಸಿ ಕೆಟಗೇರಿಯ 1,280 ಮನೆಗಳಿಗೆ ಹಾನಿಯಾಗಿದ್ದು, ರೂ.6,12,00,000/- ಪರಿಹಾರವನ್ನು ನೀಡಲಾಗಿದೆ. ಒಟ್ಟಾರೆ ಮನೆ ಹಾನಿಯಾದ ಎ.ಬಿ ಮತ್ತು ಸಿ ಕೆಟಗೇರಿಯ ಒಟ್ಟು 1,968 ಮನೆಗಳಿಗೆ ಇಲ್ಲಿಯವರೆಗೆ 12,09,22,800/- ರೂ.ಗಳ ಪರಿಹಾರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

Edited By : Nagesh Gaonkar
Kshetra Samachara

Kshetra Samachara

17/12/2021 05:07 pm

Cinque Terre

33.7 K

Cinque Terre

1

ಸಂಬಂಧಿತ ಸುದ್ದಿ