ಕುಂದಗೋಳ : ತಾಲೂಕಿನ ಮಳಲಿ ಹಾಗೂ ಕುಂಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಠಪತಿ ಹಾಗೂ ಶಿಕ್ಷಣ ಇಲಾಖೆ ಸಹನಿರ್ದೇಶಕರು ಭೇಟಿ ನೀಡಿ ಮಕ್ಕಳ ಜೊತೆ ಸಂವಾದ ನಡೆಸಿದರು.
ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು ಮಕ್ಕಳು ತರಗತಿಗೆ ಹಾಜರಾಗುವ ವರದಿ ಹಾಗೂ ಅವರ ನಿಯಮಿತ ಅಭ್ಯಾಸದ ವಿವರಗಳನ್ನು ವಿಕ್ಷೀಸಿ ಮಕ್ಕಳ ಅಭಿವೃದ್ಧಿಗೆ ಶಾಲಾ ಶಿಕ್ಷಕರು ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.
ಬಳಿಕ ಒಬ್ಬೋಬ್ಬರಾಗಿ ಮಕ್ಕಳಿಗೆ ಪ್ರಶ್ನೋತ್ತರ ಆಧುನಿಕ ವಿದ್ಯಮಾನಗಳ ಕುರಿತು ಪ್ರಶ್ನೆ ಮಾಡಿದ ಅವರು ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧನೆ ಗಮನಿಸಿ ಶಿಕ್ಷಣದ ಜೊತೆ ಮಕ್ಕಳ ಮಾನಸಿಕ ಅಭಿವೃದ್ಧಿಗೆ ಶಿಕ್ಷಕರು ಪ್ರಯತ್ನ ಪಡುವಂತೆ ಸಲಹೆ ನೀಡಿದರು.
Kshetra Samachara
30/11/2021 02:38 pm