ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ವೇದಾಂತ ಫೌಂಡೇಶನ್ ವತಿಯಿಂದ ನಿರ್ಮಾಣವಾಗುತ್ತಿರುವ ಹೈಟೆಕ್ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ದೆಹಲಿಯ ವೇದಾಂತ ಪೌಂಡೇಶನ್ ಅಧಿಕಾರಿಗಳಾದ ಶಂಕರ್ ಹಾಗೂ ಧಾರವಾಡದ ಶ್ರೂಪ ನಾಯಕ್ ಹಾಗೂ ಈಶ್ವರಪ್ಪ ಬೇವಿನಮರದ ಅಂಗನವಾಡಿ ಕಾಮಗಾರಿಯನ್ನು ವೀಕ್ಷಿಸಿದರು.
ಈ ಹೈಟೆಕ್ ಅಂಗನವಾಡಿಯಲ್ಲಿ ಸೋಲಾರ್ ಟಿವಿ ಇನ್ನಿತರ ವಸ್ತುಗಳು ಲಭ್ಯವಿರುತ್ತದೆ. ಅದನ್ನು ಯಾವತ್ತೂ ದುರುಪಯೋಗವಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಶಂಕರ್ ಹೇಳಿದರು. ಈ ಸಂದರ್ಭದಲ್ಲಿ ಅಂಗನವಾಡಿ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಯೋಗಪ್ಪನವರ, ಅಂಗನವಾಡಿ ಕಾರ್ಯಕರ್ತೆಯರ ಯಲ್ಲವ್ವ ಹುಲಿಕಟ್ಟಿ ಹಾಗೂ ಊರಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
18/11/2021 07:32 pm